ಜೆಡಿಎಸ್ ಮೈತ್ರಿ ಒಳಜಗಳ ತಾರಕಕ್ಕೆ

ಜೆಡಿಎಸ್ ಒಳಜಗಳ ದಿನದಿನಕ್ಕೂ ತಾರಕ್ಕೇರುತ್ತಿದ್ದು, ಅತೃಪ್ತ ಶಾಸಕರು ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕ್ಷಮೆ ಯಾಚಿಸುವಂತೆ...
ಎಚ್ ಡಿ ದೇವೆಗೌಡ
ಎಚ್ ಡಿ ದೇವೆಗೌಡ
Updated on: 
ಬೆಂಗಳೂರು: ಜೆಡಿಎಸ್ ಒಳಜಗಳ ದಿನದಿನಕ್ಕೂ ತಾರಕ್ಕೇರುತ್ತಿದ್ದು, ಅತೃಪ್ತ ಶಾಸಕರು ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕ್ಷಮೆ ಯಾಚಿಸುವಂತೆ ಒತ್ತಾಯಿಸುವ ಹಂತಕ್ಕೆ ಬಂದಿದ್ದಾರೆ. 
ಮೈತ್ರಿ ವಿಚಾರವನ್ನೇ ದೊಡ್ಡದು ಮಾಡಿ ನಿಂದಿ ಸುತ್ತಿರುವುದು ಸರಿಯಲ್ಲ. ಇದಕ್ಕೆ ಕುಮಾರಸ್ವಾಮಿ ಕ್ಷಮೆ ಕೋರಬೇಕು ಎಂದು ಅತೃಪ್ತ ಶಾಸಕರು ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರ ಮುಂದೆ ಪ್ರಸ್ತಾಪಿಸಲು ಮುಂದಾಗಿದ್ದಾರೆ. 
ಡಿ.3ರಂದು ಬೆಂಗಳೂರಿನ ಪಂಚತಾರಾ ಹೊಟೇಲ್ ಒಂದರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದ್ದು, ಅಲ್ಲಿ ಇದೇ ವಿಚಾರವನ್ನು ಮುಖ್ಯವಾಗಿ ಪ್ರಸ್ತಾಪಿಸಲು ಅತೃಪ್ತರು ನಿರ್ಧರಿಸಿದ್ದಾರೆ ಎನ್ನಲಾಗಿದೆ. 
ಇದೇ ವೇಳೆ, ಕುಮಾರಸ್ವಾಮಿ ಹೇಳಿಕೆಯಿಂದ ಶಾಸಕರು ಇನ್ನಷ್ಟು ಬೇಸರಗೊಂಡಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಕರೆಸಿಕೊಂಡು ಚರ್ಚಿಸಿದ್ದಾರೆ. ಪಕ್ಷದೊಳಗೆ ಹೆಚ್ಚುತ್ತಿರುವ ಅತೃಪ್ತಿಯ ಬೆಂಕಿಯನ್ನು ಕಾರ್ಯಕಾರಿಣಿ ಒಳಗಾಗಿ ಆರಿಸಿಬೇಕು. 
ಚುನಾವಣೆಗೆ ಸಜ್ಜಾಗಬೇಕೆಂಬ ನಿಟ್ಟಿನಲ್ಲಿ ಗೌಡರು ಮತ್ತು ಕುಮಾರಸ್ವಾಮಿ ನಡುವೆ ಚರ್ಚೆ ನಡೆದಿದೆ ಎಂದೂ ಹೇಳಲಾಗಿದೆ. ಅತೃಪ್ತರ ಬೇಸರ ಏನು ?:ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಮೈತ್ರಿ ಮಾತುಕತೆಗೆ ಮುಂದಾಗಿದ್ದೇ ದೊಡ್ಡ ತಪ್ಪು ಎನ್ನುವಂತೆ ಬಿಂಬಿಸಿ, ಕಾಂಗ್ರೆಸ್ ಏಜೆಂಟ್ ಎಂದು ಕುಮಾರಸ್ವಾಮಿ ಬಹಿರಂಗವಾಗಿ ನಿಂದಿಸಿರುವುದಕ್ಕೆ ಪಕ್ಷದ ಕೆಲವು ಶಾಸಕರು ತೀರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ಪಕ್ಷ ಹೆಚ್ಚಿನ ಸ್ಥಾನಗಳಿಸಲು ಎನ್ನುವ ಕಾರಣಕ್ಕೆ ಮೈತ್ರಿಗೆ ಮುಂದಾಗಿರುವುದೇ ದೊಡ್ಡ ತಪ್ಪುವಂತೆ ಬಿಂಬಿಸಲಾಗಿದ್ದು, ಸಾರ್ವಜನಿಕವಾಗಿ ಕಳ ನಾಯಕರಂತೆ ಚಿತ್ರಿಸುತ್ತಿರುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ. ಅಷ್ಟೇ ಅಲ್ಲ. ಪಕ್ಷದ ಒಳಿತಿಗಾಗಿ ಶ್ರಮಿಸಿದ ನಮ್ಮನ್ನು ನಿಂದಿಸಿರುವ ಕುಮಾರಸ್ವಾಮಿ ಕ್ಷಮೆ ಯಾಚಿಸಬೇಕು. ಇಲ್ಲವೇ ನಮ್ಮನ್ನು ಪಕ್ಷದಿಂದ ತೆಗೆಯಬೇಕು ಎಂದು ಅತೃಪ್ತ ಶಾಸಕರು ಗುಡುಗಿದ್ದಾರೆ ಎನ್ನಲಾಗಿದೆ. 
ಪಕ್ಷ ಎನ್ನುವುದು ಒಬ್ಬರ ಆಸ್ತಿಯಲ್ಲ. ಅದರ ಬೆಳವಣಿಗೆಗಾಗಿ ನಾವು ದುಡಿದಿದ್ದೇವೆ. ನಮಗೂ ಸ್ವಾಭಿಮಾನವಿದೆ. ಆದ್ದರಿಂದ ಪಕ್ಷದ ಅಭಿವೃದ್ಧಿಗೆ ಯತ್ನಿಸಿದವರನ್ನೇ ತಪ್ಪು ಎಂದು ಬಿಂಬಿಸುವುದಾದರೆ ನಮ್ಮನ್ನೇಕೆ ಮೈತ್ರಿಮಾತುಕತೆಗೆ ಬಳಸಿಕೊಳ್ಳಬೇಕು. 
ಈ ಬಗ್ಗೆ ನಾವೇನೂ ಸ್ವಂತಕ್ಕಾಗಿ ಮೈತ್ರಿ ಮಾತುಕತೆ ನಡೆಸಿಲ್ಲ. ಮಾಡಿದ ಎಲ್ಲಾ ಪ್ರಯತ್ನಗಳೂ ಪಕ್ಷಕ್ಕಾಗಿಯೇ ಎನ್ನುವ ಬಗ್ಗೆ ದೇವೇಗೌಡರೇ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಕೆಲವು ಶಾಸಕರು ಚರ್ಚೆ ನಡೆಸಿದ್ದಾರೆ ಎಂದೂ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com