'ಮೋದಿ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಕಾಳಜಿಯಿಲ್ಲ,ಇದು ದುರುದ್ದೇಶದಿಂದ ತರುತ್ತಿರುವ ಮಸೂದೆ': ಪ್ರಿಯಾಂಕ್ ಖರ್ಗೆ; Video

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ಹೆಸರು ಹೇಳಿಕೊಂಡು ಮತ್ತೊಂದು ಮೋಸ ಮಾಡಲು ಹೊರಟಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಅನುಮೋದನೆಗೊಂಡು ಎರಡು ವರ್ಷ ಮೇಲಾಗಿದೆ. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ತರಲು ಯಾವುದೇ ಅಡ್ಡಿ ಇಲ್ಲ. ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಅವರು ಸಂಬಂಧ ಕಲ್ಪಿಸುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೋದಿ ಸರ್ಕಾರಕ್ಕೆ ನಿಜವಾಗಿಯೂ ಮಹಿಳಾ ಮೀಸಲಾತಿ ಬಗ್ಗೆ ಕಾಳಜಿಯಿದ್ದರೆ ಇಂದೇ ಜಾರಿಗೆ ತರಬಹುದು. ಡಿಲಿಮಿಟೇಶನ್ ಜೊತೆ ಜಾರಿಗೆ ತರಬೇಕೆಂದು ಏಕೆ ಹೊರಟಿದ್ದಾರೆ, ಮಸೂದೆಯ ಕರಡು ಯಾವ ಪಕ್ಷದವರಿಗೂ ಲಭ್ಯವಿಲ್ಲ. ಈಗ ತುರ್ತಾಗಿ ಅಧಿವೇಶನ ಕರೆದಿದ್ದಾರೆ, ವಿರೋಧ ಪಕ್ಷಗಳು ಹೇಗೆ ಸದನದಲ್ಲಿ ಚರ್ಚೆ ನಡೆಸುವುದು ಎಂದು ಕೇಳಿದರು.
ಯಾವುದೇ ಮಸೂದೆಯನ್ನು ಜಾರಿಗೆ ತರುವ ಮುನ್ನ ಅದರ ಸಾಧಕ-ಬಾಧಕ ಚರ್ಚೆ ಮಾಡಬೇಕು, ಅದರ ಬಗ್ಗೆ ಯಾರ ಜೊತೆ ಚರ್ಚೆ ಮಾಡಿದ್ದಾರೆ, ಕೊನೆಯವರೆಗೂ ಅಧಿಕಾರದಲ್ಲಿರಬೇಕೆಂದು ಡಿಲಿಮಿಟೇಶನ್ ತರಲು ಹೊರಟಿದ್ದಾರೆ. ಮಹಿಳಾ ಮೀಸಲಾತಿ ಬಗ್ಗೆ ನಿಜವಾಗಿಯೂ ಮೋದಿ ಸರ್ಕಾರಕ್ಕೆ ಕಾಳಜಿಯಿಲ್ಲ, ಮೋದಿಯವರು ಮನಸ್ಸು ಮಾಡಿದರೆ ಒಂದ್ನಿಮಿಷದಲ್ಲೇ ಜಾರಿಗೆ ತರಬಹುದು, ಇದು ದುರುದ್ದೇಶದಿಂದ ತರುತ್ತಿರುವ ಮಸೂದೆ ಎಂದು ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


