₹11 ಲಕ್ಷದ ಝುಮರ್, ₹5 ಲಕ್ಷದ ಸೋಫಾ: ಕೇಜ್ರಿವಾಲ್‌ರ 'ಶೀಶ್ಮಹಲ್' ಒಳಗಿನ ದೃಶ್ಯ ಬಹಿರಂಗ! Video

ನವದೆಹಲಿ: ಕಳೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದ ಮತ್ತು ಬಿಜೆಪಿಯಿಂದ ತೀವ್ರ ಟೀಕೆಗೊಳಗಿದ್ದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿವಾದಿತ ನಿವಾಸ 'ಶೀಶ್ಮಹಲ್' ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ದೆಹಲಿ ಬಿಜೆಪಿ ಸರ್ಕಾರವು ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸವನ್ನು ಆಡಳಿತಾರೂಢ ಬಿಜೆಪಿ ಅದ್ಧೂರಿ ಅರಮನೆ ಎಂದು ಕರೆದಿದ್ದು, ಶುಕ್ರವಾರ ಮಾಧ್ಯಮಗಳ ವೀಕ್ಷಣೆಗೆ ಮುಕ್ತಗೊಳಿಸಿದೆ.
ಈ "ಐಷಾರಾಮಿ" ನಿವಾಸದಲ್ಲಿ 11.56 ಲಕ್ಷ ರೂಪಾಯಿ ಮೌಲ್ಯದ ಝುಮರ್(chandelier), 5.47 ಲಕ್ಷ ರೂಪಾಯಿ ಮೌಲ್ಯದ ಎರಡು ಆಸನಗಳ ಸೋಫಾ ಮತ್ತು 2.42 ಲಕ್ಷ ರೂಪಾಯಿ ಮೌಲ್ಯದ ರಿಕ್ಲೈನರ್ ಕುರ್ಚಿಗಳು ಇವೆ.
ಮಾಧ್ಯಮಗಳ ವೀಕ್ಷಣೆಯ ಸಂದರ್ಭದಲ್ಲಿ ಮಾತನಾಡಿದ ದೆಹಲಿ ಸಚಿವ ಪರ್ವೇಶ್ ವರ್ಮಾ, "ಸಾರ್ವಜನಿಕ ಹಣವನ್ನು ಹೇಗೆ ಖರ್ಚು ಮಾಡಲಾಗಿದೆ ಎಂಬುದನ್ನು ನಾವು ತೋರಿಸುತ್ತಿದ್ದೇವೆ ಅಷ್ಟೇ. ಇದನ್ನು ಅರವಿಂದ್ ಕೇಜ್ರಿವಾಲ್ ಅವರೇ ಖರ್ಚು ಮಾಡಿದ್ದಾರೆ" ಎಂದು ಹೇಳಿದರು.
"ತಾನು ಸರ್ಕಾರಿ ವಾಹನವನ್ನಾಗಲಿ ಅಥವಾ ಸರ್ಕಾರಿ ನಿವಾಸವನ್ನಾಗಲಿ ಬಳಸುವುದಿಲ್ಲ ಎಂದು ಕೇಜ್ರಿವಾಲ್ ಹೇಳುತ್ತಿದ್ದರು. ಆದರೆ ಈ ಸರ್ಕಾರಿ ಬಂಗಲೆಗಾಗಿ 56 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ" ಎಂದು ಹಿರಿಯ ಬಿಜೆಪಿ ನಾಯಕ ತಿಳಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಜನರು ಸಾವನ್ನಪ್ಪುತ್ತಿದ್ದಾಗ, ಆಮ್ ಆದ್ಮಿ ಪಕ್ಷದ(AAP) ನಾಯಕ ಈ 'ಶೀಷ್ ಮಹಲ್' ಅನ್ನು ನಿರ್ಮಿಸಿಕೊಂಡರು ಎಂದು ವರ್ಮಾ ಆರೋಪಿಸಿದರು.
ಮಾಧ್ಯಮ ಪ್ರತಿನಿಧಿಗಳಿಗೆ ನಿವಾಸವನ್ನು ತೋರಿಸುವಾಗ, "ಪ್ರತಿಯೊಬ್ಬರೂ 'ಫೇಸ್‌ಬುಕ್ ಲೈವ್' ಮಾಡುವ ಕೋಣೆಯನ್ನು ನೋಡಲೇಬೇಕು" ಎಂದು ವರ್ಮಾ ಒತ್ತಿ ಹೇಳಿದರು.
ಹರಿದ ಆಸನವನ್ನು ಹೊಂದಿದ್ದ ಮರದ ಕುರ್ಚಿಯೊಂದನ್ನು ತೋರಿಸುತ್ತಾ, "ಈ ಕೋಣೆಯಲ್ಲಿ ಎಲ್ಲವೂ ಬಹಳ ಸರಳವಾಗಿತ್ತು" ಎಂದು ವರ್ಮಾ ತಿಳಿಸಿದರು.
2015ರಿಂದ 2024ರವರೆಗೆ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅರವಿಂದ್ ಕೇಜ್ರಿವಾಲ್ ವಾಸವಾಗಿದ್ದ '6, ಫ್ಲ್ಯಾಗ್‌ಸ್ಟಾಫ್ ರೋಡ್' ಬಂಗಲೆ, 2025ರ ಫೆಬ್ರವರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. ಕೇಜ್ರಿವಾಲ್ ಅವರ ಭ್ರಷ್ಟಾಚಾರದ ಆರೋಪಗಳನ್ನು ಎತ್ತಿ ತೋರಿಸಲು ಬಿಜೆಪಿ ಈ ನಿವಾಸವನ್ನು ಶೀಶ್ ಮಹಲ್ ಎಂದು ಕರೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



