ಬೆಂಗಳೂರು: ದೇಶದಲ್ಲಿ ಪ್ರಧಾನಿ ಮೋದಿ ಅವರ ಜನಪ್ರಿಯತೆ ಕಡಿಮೆಯಾಗುತ್ತಿ ದ್ದು, ಇದನ್ನು ಮೋದಿ ಅವರಿಗೆ ಮನವರಿಕೆ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಮೋದಿ ಅವರನ್ನು ಮೂರನೇ ಬಾರಿ ಭೇಟಿಯಾದಾಗ ಅವರಿಗೆ ಅನೇಕ ವಿಚಾರಗಳನ್ನು ನೇರವಾಗಿಯೇ ಹೇಳಿ ದ್ದೇನೆ. ನಿಮ್ಮ ಸಚಿವರು ಏನೂ ಮಾಡುತ್ತಿದ್ದಾರೆ ಗೊತ್ತಿ ದೆಯೇ? ಎಂದು ಪ್ರಶ್ನಿಸಿ ಸಚಿವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದೇನೆ. ಅಷ್ಟಾದರೂ ಮೋದಿ ಮಾತ್ರ ಮೌನಂ ಕಲಂ ನಾಸ್ತಿ ಎನ್ನುವಂತೆ ಇರುತ್ತಾರೆ. ಅಂಥವರೊಂದಿಗೆ ಏನು ಮಾತನಾಡುವುದು. ಯಾವ ರೀತಿಯ ಹೋರಾಟ ನಡೆಸುವುದು ಎಂದು ದೇವೇಗೌಡರು ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ಬೇಸರ ವ್ಯಕ್ತಪಡಿಸಿದರು.