

ಗುವಾಹಾಟಿ: ಬಿಜೆಪಿ ನಾಯಕ ಅರುಣ್ ಶೌರಿ ಅವರ ದುರ್ಬಲ ಪ್ರಧಾನಿ ಕಾರ್ಯಾಲದ ಹೇಳಿಕೆಗೆ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯಿ ಬೆಂಬಲ ಸೂಚಿಸಿದ್ದಾರೆ.
ಅರುಣ್ ಶೌರಿ ಹೇಳಿಕೆಯನ್ನು ಸಂಪೂರ್ಣ ಒಪ್ಪುತ್ತೇನೆ ಎಂದಿರುವ ತರುಣ್ ಗೊಗೋಯಿ, ಪ್ರಧಾನಿ ನರೇಂದ್ರ ಮೋದಿ ಎಷ್ಟೋ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ದೇಶದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಏಕೆ ಮೌನ ವಹಿಸಿದ್ದಾರೆ ಎಂದು ಗೊಗೋಯಿ ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಭರವಸೆಗಳು ವಿಫಲವಾಗಿದೆ. ಪ್ರಧಾನಿ ಉದ್ಯೋಗಗಳ ಸೃಷ್ಟಿಗೆ ಅನುಕೂಲ ವಾತಾವರಣ ನಿಮಿಸುವುದಾಗಿ ಹೇಳಿದ್ದರು. ಆದರೆ ನಿರೀಕ್ಷೆಯಂತೆ ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ತರುಣ್ ಗೊಗೋಯಿ ಆರೋಪಿಸಿದ್ದಾರೆ.
ಬೆಲೆ ಕಾಲುಗಳ ಬೆಲೆ ಏರಿಕೆಯಾಗುತ್ತಿದೆ. ಆದರೂ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ, ಅಸ್ಸಾಂ ನಲ್ಲಿ ಪ್ರವಾಹ ಉಂಟಾಗಿರುವುದಕ್ಕೆ ಪ್ರಧಾನಿ 1 ,200 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಗೊಗೋಯಿ ಕಿಡಿಕಾರಿದ್ದಾರೆ.