ಹೆಣ್ಣು ಮಕ್ಕಳನ್ನು ಸಾಯಿಸುತ್ತಿರುವ ಸರ್ಕಾರ!

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಭಾಗ್ಯಲಕ್ಷಿ ಯೋಜನೆಯನ್ನು ಹಳ್ಳ ಹಿಡಿಸುವ ...
ರೈತ ಚೈತನ್ಯ ಯಾತ್ರೆಯ ಸಮಾವೇಶದಲ್ಲಿ ಶೋಭಾ ಕರಂದ್ಲಾಜೆ (ಕೃಪೆ :ಕೆಪಿಎನ್ )
ರೈತ ಚೈತನ್ಯ ಯಾತ್ರೆಯ ಸಮಾವೇಶದಲ್ಲಿ ಶೋಭಾ ಕರಂದ್ಲಾಜೆ (ಕೃಪೆ :ಕೆಪಿಎನ್ )
Updated on: 

ಹೆಬ್ಬೂರು (ತುಮಕೂರು ಗ್ರಾಮಾಂತರ): ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಭಾಗ್ಯಲಕ್ಷಿ ಯೋಜನೆಯನ್ನು ಹಳ್ಳ ಹಿಡಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೆಣ್ಣು ಮಕ್ಕಳನ್ನು ಸಾಯಿಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಗುರುವಾರ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರು ಹೋಬಳಿ ಕೇಂದ್ರದಲ್ಲಿ ನಡೆದ ರೈತ ಚೈತನ್ಯ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಬಿಜೆಪಿ ಸರ್ಕಾರವಿದ್ದಾಗ 3.90 ಲಕ್ಷ ಜನರಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿದ್ದೆವು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಒಂದೂವರೆ ಲಕ್ಷದಷ್ಟು ಮಾತ್ರ ಬಾಂಡ್ ವಿತರಿಸಿದೆ. ಅಂದರೆ ಈ ರಾಜ್ಯದಲ್ಲಿ ಹೆಣ್ಣು ಮಕ್ಕಳು ಹುಟ್ಟುತ್ತಿಲ್ಲವೋ? ಹುಟ್ಟಿದೆ ಹೆಣ್ಣು ಮಕ್ಕಳನ್ನು ಸಾಯಿಸಲಾಗುತ್ತಿದೆಯೆ? ಭಾಗ್ಯಲಕ್ಷ್ಮಿಯಂತಹ ಮಹತ್ವದ ಯೋಜನೆಯನ್ನು ಮುಂದೊಂದು ದಿನ ನಿರ್ನಾಮ ಮಾಡಲು ಸರ್ಕಾರ ಹೊರಟಿದೆಯಾ ಎಂಬ ವಿಷಯವನ್ನು ಸರ್ಕಾರ ರಾಜ್ಯದ ಜನರಿಗೆ ತಿಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಅನ್ನಭಾಗ್ಯದ ಅಕ್ಕಿ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಅನ್ನಭಾಗ್ಯ ಘೋಷಿಸಿದಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮಮಾತನ್ನು ಪೂರೈಸುವಲ್ಲಿ ಸೋತಿದ್ದಾರೆ. ಕೆಜಿಗೆ 1 ರುಪಾಯಿಯಂತೆ 30 ಕೆಜಿ ಅಕ್ಕಿ ಕೊಡುವುದಾಗಿವಾಗ್ದಾನ ನೀಡಿದ್ದ ಸರ್ಕಾರ ಈಗ 3 ಕೆಜಿ ನೀಡಲು ಒದ್ದಾಡುತ್ತಿದೆ. ಕೇಂದ್ರ ಸರ್ಕಾರ 1.67 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯಕ್ಕೆ ಕಳುಹಿಸುತ್ತಿದೆ. ಆದರೆ, ಕಾಂಗ್ರೆಸ್ ಪುಡಾರಿಗಳು ಅಕ್ಕಿಯನ್ನು ಪಕ್ಕದ ತಮಿಳುನಾಡು ರಾಜ್ಯಕ್ಕೆ ಮಾರುತ್ತಿದ್ದಾರೆ. ಕರ್ನಾಟಕದ ಅಕ್ಕಿ ತಮಿಳುನಾಡಿನ ಅಮ್ಮ ಇಡ್ಲಿಗೆ ಬಳಕೆಯಾಗುತ್ತಿದೆ ಎಂದು ವ್ಯಂಗ್ಯವಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿದ್ದ ಅನುದಾನದ ಪ್ರಮಾಣವನ್ನು ಶೇ.3ರಿಂದ 42ಕ್ಕೆ ಹೆಚ್ಚಿಸಿದೆ. ಆದ್ದರಿಂದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಸಂಸದ ಬಿ. ಶ್ರೀರಾಮುಲು ಮಾತನಾಡಿ, ನಾವು ಹಿಂದೆ ಮಾಡಿದ ತಪ್ಪಿನಿಂದಾಗಿ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ನಡೆಸುತ್ತಿದೆ. ಮುಂದೆಂದಿಗೂ ನಾವು ಹಿಂದಿನ ತಪ್ಪು ಮಾಡುವುದಿಲ್ಲ. 2018ರ ವೇಳೆಗೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಅವರ ಬೆನ್ನ ಹಿಂದೆ ನಾವೆಲ್ಲ ನಿಂತಿದ್ದೇವೆ. ದೇವರ ರೀತಿಯಲ್ಲಿ ಕಾಣಿಸುತ್ತಿರುವ ಯಡಿಯೂರಪ್ಪ ಕೊಡುಗೈ ದಾನಿಯಾಗಿದ್ದಾರೆ. ಸಿದ್ದರಾಮಯ್ಯ ಜಾಗದಲ್ಲಿ ಯಡಿಯೂರಪ್ಪ ಇದ್ದಿದ್ದರೆ ರೈತರ ಸಂಪೂರ್ಣ ಸಾಲ ಮನ್ನಾವಾಗುತ್ತಿತ್ತು. ಅಂತಹ ಕೆಲಸವನ್ನು ಸಿದ್ದರಾಮಯ್ಯ ಮಾಡುವ ಮೂಲಕ ರೈತರಿಗೆ ನೆರವಾಗಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ. ರವಿ, ಶಾಸಕರಾದ ಸುರೇಶ್‍ಗೌಡ, ನಾರಾಯಣಸ್ವಾಮಿ, ಮಾಜಿ ಸಂಸದ ಬಸವರಾಜು, ಸ್ಥಳೀಯ ಬಿಜೆಪಿ ಮುಖಂಡರಾದ ಗಣೇಶ್, ಶಂಬೂರು ಶಿವಣ್ಣ, ನಂದೀಶ್ ಇದ್ದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com