

ಬೆಂಗಳೂರು: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಂಜನಗೂಡು, ಗುಂಡ್ಲುಪೇಟೆ ವಿಧಾನ ಸಭೆ ಉಪ ಚುನಾವಣೆ ಪ್ರಚಾರದಲ್ಲಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಆದರೆ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದ ಜೆಡಿಎಸ್, ಕಾವೇರಿ ವಿಷಯವನ್ನು ಮುಂದಿಟ್ಟುಕೊಂಡು ಎರಡು ಪಕ್ಷಗಳನ್ನು ಹಣಿಯಲು ನೋಡುತ್ತಿದೆ.
ಜೆಡಿಎಸ್ ರಾಷ್ಟ್ಟೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಮತ್ತ ಕುಮಾರಸ್ವಾಮಿ ಸರ್ಕಾರ ಮತ್ತು ತನ್ನ ಪ್ರಬಲ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದೆ.
ದೆಹಲಿಯಲ್ಲಿ ಕಳೆದ 22 ದಿನಗಳಿಂದ ತಮಿಳುನಾಡು ರೈತರುಪ್ರತಿಭಟನೆ ನಡೆಸುತ್ತಿದ್ದಾರೆ. ಜಂಥರ್ ಮಂಥರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಸಾಲಮನ್ನಾ ಮತ್ತು ವಿಶೇಷ ಬರ ಪರಿಹಾರ ಘೋಷಣೆಗಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ.
ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡು ರೈತರು, ರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯಲು, ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬರುಡೆ ತಂದು ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ, ಜೊತೆಗೆ ತಿನ್ನಲು ಆಹಾರವಿಲ್ಲದ ಕಾರಣ ಇಲಿ ಮತ್ತು ಹಾವುಗಳನ್ನು ತಿನ್ನುವಂತೆ ಪ್ರದರ್ಶನ ನೀಡಿ ಪ್ರತಿಭಟನೆ ನಜಡೆಸುತ್ತುದ್ದಾರೆ.
ಕಾವೇರಿ ವಿಷಯ ಸಂಬಂದ ರಾಜ್ಯಕ್ಕಾಗಿರುವ ಅನ್ಯಾಯ ಮತ್ತು ರಾಜ್ಯದ ನೈಜ ಚಿತ್ರಣವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರು ಸಂಸತ್ತಿನಲ್ಲಿ ಸರಿಯಾಗಿ ವ್ಯಕ್ತ ಪಡಿಸುತ್ತಿಲ್ಲ ಜೆಡಿಎಸ್ ಆಕ್ರೋಶ ವ್ಯಕ್ತ ಪಡಿಸಿದೆ.
ಕಾವೇರಿ ವಿಷಯ ಸಂಬಂಧ ತಮಿಳುನಾಡು ಸಂಸದರು ರೈತರ ಪರವಾಗಿ ಸಂಸತ್ತಿನಲ್ಲಿ ತಮ್ಮ ಧ್ವನಿ ಎತ್ತುತ್ತಾರೆ, ಆದರೆ ಪ್ರಧಾನಿ ಗೆ ಬಹಳ ಹತ್ತಿರವಾಗಿರುವ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಅನಂತ್ ಕುಮಾರ್ ಕಾವೇರಿ ವಿಷಯ ಸಂಬಂಧ ತುಟಿ ಬಿಚ್ಚುತ್ತಿಲ್ಲ, ರಾಹುಲ್ ಗಾಂಧಿ ತಮಿಳುನಾಡಿನ ರೈತರಿಗೆ ಬೆಂಬಲ ನೀಡುತ್ತಿದ್ದಾರೆ, ಆದರೆ ಕಾಂಗ್ರೆಸ್ ಮತ್ತು ಬಿಜೆಪಿಗಳು ಕೇವಲ ಉಪ ಚುನಾವಣೆ ಬಗ್ಗೆ ಮಾತ್ರ ತಲೆ ಕೆಡಿಸಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಆರೋಪಿಸಿದ್ದಾರೆ.