ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆಲುವು: ಡಿಕೆಶಿ ಬೆನ್ನುತಟ್ಟಿದ ಸೋನಿಯಾ ಗಾಂಧಿ

ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಗೆಲುವಿಗೆ ಇಂಧನ ಸಚಿವ...
ಡಿ.ಕೆ ಶಿವಕುಮಾರ್ ಮತ್ತು ಸೋನಿಯಾ ಗಾಂಧಿ
ಡಿ.ಕೆ ಶಿವಕುಮಾರ್ ಮತ್ತು ಸೋನಿಯಾ ಗಾಂಧಿ
Updated on: 
ಬೆಂಗಳೂರು: ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಗೆಲುವಿಗೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಶ್ರಮ ವಹಿಸಿದ್ದರು.
ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಶಿವಕುಮಾರ್ ಗೆ ಅಭಿನಂದಿಸಿದ್ದಾರೆ. 
ಪಟೇಲ್ ಗೆಲುವಿಗೆ ಕಾರಣವಾದ ಡಿಕೆಶಿಯನ್ನು ವಾಸ್ತುಶಿಲ್ಪಿ ಎಂದು ಶ್ಲಾಘಿಸಿದ್ದಾರೆ. ದೂರವಾಣಿ ಮೂಲಕ ಶಿವಕುಮಾರ್ ಅವರನ್ನು ಸಂಪರ್ಕಿಸಿದ ಸೋನಿಯಾ ಮತ್ತು ಪಟೇಲ್ ಶಿವಕುಮಾರ್ ಅವರಿಗೆ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತದೆಂಬ ಭೀತಿಯಿಂದ ಕಳೆದ ತಿಂಗಳು ಗುಜರಾತ್  ಕಾಂಗ್ರೆಸ್ ನ 44 ಶಾಸಕರನ್ನು ಕರೆತಂದು ಬೆಂಗಳೂರಿನ ಹೊರವಲಯದ ರೆಸಾರ್ಟ್ ನಲ್ಲಿಡಲಾಗಿತ್ತು. ಸುಮಾರು 10 ದಿನಗಳಿಂದ ನಡೆದ ರಾಜಕೀಯ ಹೈಡ್ರಾಮಾ ಅಹ್ಮದ್ ಪಟೇಲ್ ಗೆಲುವಿನೊಂದಿಗೆ ಮುಗಿದಿತ್ತು,
ಈ ಅವಧಿಯಲ್ಲಿ ಬೆಂಗಳೂರಿನ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com