ಇನ್ನೂ ವರುಣಾ ಕ್ಷೇತ್ರದ ಬಿಜೆಪಿ ಘಟಕ ಕೈಕಟ್ಟಿ ಕೂತಿಲ್ಲ, ಯತೀಂದ್ರ ಅವರನ್ನು ಸೋಲಿಸಲು ವಿಜಯೇಂದ್ರ ಅವರಿಗಿಂತ ಸಮರ್ಥ ಅಭ್ಯರ್ಥಿ ಬೇರೊಬ್ಬರಿಲ್ಲ ಎಂದು ಹೇಳುತ್ತಿದೆ, ಹೀಗಾಗಿ ವಿಜಯೇಂದ್ರ ಕೂಡ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಮೈಸೂರಿನಲ್ಲಿ ತಮ್ಮ ರಾಜಕೀಯ ಜಿವನ ಆರಂಭಸಿದ್ದಾರೆ, ಜೆಎಸ್ ಎಸ್ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ವಿಜಯೇಂದ್ರ ದಂಪತಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.