ರಾಜ್ಯ ವಿಧಾನಸಭೆ ಚುನಾವಣೆ: ಬೆಂಗಳೂರಿನಲ್ಲಿ ಬಿಜೆಪಿ 'ಮಾತೃಭಾಷೆ' ರಾಜಕೀಯ!

ಪ್ರಾದೇಶಿಕತೆ ಆಧಾರದ ಮೇಲೆ ಮತದಾರರನ್ನು ಟಾರ್ಗೆಟ್ ಮಾಡಲು ಬಿಜೆಪಿ ತಯಾರಿ ನಡೆಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗುಜರಾತಿಗಳು ಇರುವ ಭಾಗದಲ್ಲಿ ಗುಜರಾತ್ ನಾಯಕರು ...
ಬಿಜೆಪಿ ಪ್ರಮುಖ ನಾಯಕರು
ಬಿಜೆಪಿ ಪ್ರಮುಖ ನಾಯಕರು
Updated on: 
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ನಡೆಯುವಾಗ ರಾಷ್ಟ್ರೀಯ ಪಕ್ಷಗಳ ಮುಖಂಡರು ಕರ್ನಾಟಕಕ್ಕೆ ಬಂದು ಪ್ರಚಾರ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈ ಬಾರಿಯ ಚುನಾವಣೆ ಕೂಡ ಇದಕ್ಕೆ ಹೊರತಾಗಿಲ್ಲ, ಬಿಜೆಪಿ ತನ್ನ ಪ್ರಚಾರದ ಕಾರ್ಯ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದೆ. 
ಪ್ರಾದೇಶಿಕತೆ ಆಧಾರದ ಮೇಲೆ ಮತದಾರರನ್ನು ಟಾರ್ಗೆಟ್ ಮಾಡಲು ಬಿಜೆಪಿ ತಯಾರಿ ನಡೆಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗುಜರಾತಿಗಳು ಇರುವ ಭಾಗದಲ್ಲಿ ಗುಜರಾತ್ ನಾಯಕರು ಚುನಾವಣಾ ಪ್ರಚಾರ ನಡೆಸಲಿದ್ದು ಅವರು ಭಾಷೆಯಲ್ಲಿ ಮತಯಾಚನೆ ಮಾಡಲಿದ್ದಾರೆ.
ರಾಜ್ಯದ 224 ಕ್ಷೇತ್ರಗಳ ಪೈಕಿ 15 ವಿಧಾನಸಭೆ ಕ್ಷೇತ್ರಗಳ ಮೇಲೆ  ಬಿಜೆಪಿ ರಾಷ್ಚ್ರೀಯ ಅಧ್ಯಕ್ಷ ಅಮಿತ್ ಶಾ ಕಣ್ಣಿಟ್ಟಿದ್ದಾರೆ. ಬೆಂಗಳೂರು ನಗರ ವಿಧಾನಸಭೆ ಕ್ಷೇತ್ರ ಅದರಲ್ಲಿ ಪ್ರಮುಖವಾದದ್ದುದ್ದಾಗಿದೆ.  2013 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 12 ಸೀಟುಗಳಲ್ಲಿ ಜಯಗಳಿಸಿತ್ತು.
ಈ ಮೊದಲು ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡಿಗರಿದ್ದರು, ನಂತರ ಕನ್ನಡಿಗರ ಪ್ರಮಾಣ ಕಡಿಮೆಯಾಗಿತ್ತು. ಕೇವಲ 38 ರಿಂದ 40 ಪರ್ಸೆಂಟ್ ಕನ್ನಡಿಗರು ಬೆಂಗಳೂರಿನಲ್ಲಿದ್ದಾರೆ ಎಂದರೇ, ಉಳಿದವರು ಬೇರೆ ಭಾಷಿಕರು ಎಂದರ್ಥ, ಅದರಲ್ಲಿ ಸುಮಾರು ಮಂದಿ 2 ನೇ ತಲೆಮಾರಿನ ಮತದಾರರಾಗಿದ್ದಾರೆ, ಚುನಾವಣೆ ಸಮಯದಲ್ಲಿ ಸಾಂಪ್ರಾದಾಯಿಕ ಮತದಾರರನ್ನು ಗುರಿಯಾಗಿಸಿಕೊಳ್ಳುತ್ತೇವೆ,  ಈ ಬಾರಿ ಕನ್ನಡಿಗರೇತರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.
ಸೋಮವಾರದಿಂದ ಹಲವು ರಾಷ್ಟ್ರೀಯ ನಾಯಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ನೌಕರರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಏಪ್ರಿಲ್ 27 ರಿಂದ ಹಲವು ಮಂದಿ ಬಿಜೆಪಿ ರಾಷ್ಟ್ರೀಯ ನಾಯಕರು ಬೆಂಗಳೂರಿಗೆ ಆಗಮಿಸಲಿದ್ದಾರೆ, 
ಮಲ್ಲೇಶ್ವರಂ ನ ಬಿಜೆಪಿ ಕಚೇರಿ ಸುತ್ತಮುತ್ತ ಇರುವ ಹೋಟೆಲ್ ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ, ಪ್ರತಿದಿನ ಎರಡರಿಂದ ಮೂರು ನಾಯಕರು ಆಯ್ದ ವಿಧಾನಸಭೆ ಕ್ಷೇತ್ರಗಳಲ್ಲಿ ಚುನವಣಾ ಪ್ರಚಾರ ನಡೆಸಲಿದ್ದಾರೆ, ಈ ನಾಯಕರು, ಹೊರ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಜನರನ್ನುದ್ದೇಶಿಸಿ ಆಯಾ ಭಾಷೆಗಳಲ್ಲಿ  ಪ್ರಚಾರ ನಡೆಸಲಿದ್ದಾರೆ ಎಂದು ಬೆಂಗಳೂರು ನಗರ ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಎನ್ ಸದಾಶಿವ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶ ಮೂಲದ ಕೇಂದ್ರ ಸಚಿವ ಕಿರಣ್ ರಿಜಿಜು ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಪ್ರಚಾರ ನಡೆಸಲಿದ್ದಾರೆ,ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ತರ ಭಾರತದ ಜನರಿದ್ದಾರೆ. ಗುಜರಾತಿಗಳು ಹೆಚ್ಚಿರುವ ಬೆಂಗಳೂರು ಪಶ್ಚಿಮ ಭಾಗದಲ್ಲ ಅಮಿತ್ ಶಾ ಪ್ರಚಾರ ನಡೆಸಲಿದ್ದಾರೆ. ಕೆ.ಆರ್ ಪುರಂ ನಲ್ಲಿ ಅತಿ ಹೆಚ್ಚು ಮಂದಿ ಗುಜರಾತಿಗಳು ವಾಸಿಸಿದ್ದಾರೆ, ಇದರ ಜೊತೆಗೆ ಸುಶೀಲ್ ಮೋದಿ ಅವರನ್ನು ಕರೆತರಲು ಪ್ರಯತ್ನಿಲಾಗುತ್ತಿದೆ. ಇದರಿಂದ ಮತದಾರರನ್ನು ಅವರ ಪ್ರಾದೇಶಿಕ ಭಾಷಗಳಿಂದ ತಲುಪಲು ಸಾಧ್ಯವಾಗುತ್ತದೆ. ಹಾಗೂ ಅವರವರ ಮಾತೃಭಾಷೆಯಲ್ಲಿ ಭಿತ್ತಿ ಪತ್ರ ಮುದ್ರಿಸಿ ಹಂಚಲು ಸಿದ್ಧತೆ ನಡೆಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಸುಷ್ಮಾ ಸ್ವರಾಜ್, ಸ್ಮತಿ ಇರಾನಿ,  ಯುಪಿ ಸಿಎಂ ಯೋಗಿ ಆದಿತ್ಯನಾಥ್, ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಸದ್ಯ ಕನ್ನಡಿಗರಿಂದ ಹೊರತಾಗಿದೆ, ಐಟಿ ಮಂದಿ ನಂತರ  ಬೆಂಗಳೂರಿನಲ್ಲಿ ಕನ್ನಡಿಗರೇತರ ಸಂಖ್ಯೆ ಹೆಚ್ಚಾಗಿದೆ. ಕೇರಳ, ತಮಿಳುನಾಡು, ಉತ್ತರ ಭಾರತ ರಾಜ್ಯಗಳಾದ ಗುಜರಾತ್. ರಾಜಸ್ತಾನ, ಮಧ್ಯಪ್ರದೇಶ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳ ಮತದಾರರಿದ್ದಾರೆ, ಇವರೆಲ್ಲಾ ಇಲ್ಲಿ ಆಸ್ತಿ ಮಾತ್ರ ಪಡೆಯಲಿಲ್ಲ, ಅವರಿಗೆ ವೋಟರ್ ಐಡಿ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com