ರಾಹುಲ್ ಗಾಂಧಿ ಸಂವಿಧಾನ ಉಳಿಸಿ ಪ್ರಚಾರ ಸಲ್ಮಾನ್ ಖುರ್ಷಿದ್ ಅವರಿಂದ ಬಹಿರಂಗ- ಬಿಜೆಪಿ

ಹಿಂದೆ ನಡೆದಿರುವ ಗಲಭೆಗಳಲ್ಲಿ ಕಾಂಗ್ರೆಸ್ ಪಾತ್ರದ ಬಗ್ಗೆ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರೇ ಸತ್ಯ ಬಹಿರಂಗಪಡಿಸಿದ್ದಾರೆ. ಅದನ್ನು ಹಿಂದಿಟ್ಟುಕೊಂಡೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂವಿಧಾನ ಉಳಿಸಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಸಂಬಿತ್ ಪಾತ್ರ
ಸಂಬಿತ್ ಪಾತ್ರ

ಬೆಂಗಳೂರು: ಹಿಂದೆ ನಡೆದಿರುವ ಗಲಭೆಗಳಲ್ಲಿ ಕಾಂಗ್ರೆಸ್ ಪಾತ್ರದ ಬಗ್ಗೆ ಆ ಪಕ್ಷದ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರೇ ಸತ್ಯ ಬಹಿರಂಗಪಡಿಸಿದ್ದಾರೆ.  ಅದನ್ನು ಹಿಂದಿಟ್ಟುಕೊಂಡೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂವಿಧಾನ  ಉಳಿಸಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಸಲ್ಮಾನ್ ಖುರ್ಷಿದ್ ಹೇಳಿಕೆಯಂತೆ ಕಾಂಗ್ರೆಸ್ ಪಕ್ಷಕ್ಕೆ  ಮುಸ್ಲಿಮರ ರಕ್ತದ ಕಲೆ ಮಾತ್ರ ಮೆತ್ತಿಕೊಂಡಿಲ್ಲ, 1984 ರಲ್ಲಿ ಸಂಭವಿಸಿದ್ದ ಸಾವಿರಾರು ಸಿಖ್ ರ ರಕ್ತದ ಕಲೆಯೂ ಮೆತ್ತಿಕೊಂಡಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ

ದಲಿತರ ಮೇಲಿನ  ತಾರತಮ್ಯ ಹಾಗೂ ಎಸ್ . ಸಿ  ಎಸ್ . ಟಿ ಕಾಯ್ದೆ ದುರ್ಬಲ ವಿರೋಧಿಸಿ ಸೋಮವಾರ ದೆಹಲಿಯಲ್ಲಿ  ಸಂವಿಧಾನ ಉಳಿಸಿ ಪ್ರಚಾರಕ್ಕೆ ಚಾಲನೆ ನೀಡಿದ್ದ ರಾಹುಲ್  ಗಾಂಧಿ ,ಮುಂದಿನ ವರ್ಷ ಸಂವಿಧಾನ ಹಾಗೂ ದೇಶವನ್ನು ಮುಟ್ಟಲು ಬಿಜೆಪಿ ಹಾಗೂ ಆರ್ ಎಸ್ ಎಸ್ ಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು.

ಕಾಂಗ್ರೆಸ್ ನ ಕೋಮು ರಾಜಕಾರಣದ ಬಗ್ಗೆ ಉತ್ತರ ನೀಡುವಂತೆ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ ಸಂಬಿತ್ ಪಾತ್ರ,  ಆ ಪಕ್ಷದ ರೀತಿ ದ್ವಿರೂಪ ರಾಜಕೀಯವನ್ನು ಬಿಜೆಪಿ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.

 ಇಂದು ಸಂವಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಲ್ಮಾನ್ ಖುರ್ಷಿದ್,  ಕಾಂಗ್ರೆಸ್ ಪಕ್ಷದ ಕೈಯಲ್ಲಿ ಮುಸ್ಲಿಮರ ರಕ್ತದ ಕಲೆ ಇದೆ. ಆ ಪಕ್ಷದ ನಾಯಕನಾಗಿ ನನಗೆ ನನ್ನ ಕೈಯಲ್ಲಿಯೂ ಆ ಕಲೆಗಳಿವೆ ಎನಿಸುತ್ತದೆ ಎಂದು ಹೇಳಿದ್ದರು.

1984ರಲ್ಲಿನ ಸಿಖ್ ವಿರೋಧಿ ದಂಗೆ ಹಾಗೂ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಂದರ್ಭದಲ್ಲಿಯೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿತ್ತು.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com