ಇನ್ನುಳಿದಂತೆ 12ಕ್ಕೂ ಚಿತ್ರಕಲಾವಿದರು, ಕ್ರೀಡಾಪಟುಗಳು ಪಕ್ಷಗಳ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಪ್ರತೀ ಬಾರಿಯ ಚುನಾವಣೆಯಂತೆ ಈ ಬಾರಿ ಚುನಾವಣೆಯಲ್ಲೂ ನಟ-ನಟಿಯರ ಜನಪ್ರಿಯತೆ ಬಳಸಿಕೊಳ್ಳಲು ರಾಜಕೀಯ ಪಕ್ಷಗಳು ಎಂದಿನಂತೆ ಮುಂದಾಗಿವೆ. ನಟಿ ಹಾಗೂ ಸಚಿವೆ ಉಮಾಶ್ರೀ ಈ ಬಾರಿಯೂ ತೇರದಾಳ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಚಿತ್ರರಂಗದಿಂದ ಕಾಂಗ್ರೆಸ್ ಅಭ್ಯರ್ಥಿ ಇವರೊಬ್ಬರೇ. ಪಕ್ಷದ ಪರ ರಮ್ಯಾ, ಅಂಬರೀಷ್, ಮೆಗಾಸ್ಟಾರ್ ಚಿರಂಜೀವಿ, ಖುಷ್ಬೂ, ಮಾಲಾಶ್ರೀ, ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಸ್ಟಾರ್ ಕ್ಯಾಂಪೇನರ್ಗಳಾಗಿದ್ದಾರೆ.