'ನನ್ ಎಕ್ಕಡಾ' ಎನ್ನುತ್ತಿದ್ದ ಹುಚ್ಚಾ ವೆಂಕಟ್ ಗೆ ಚುನಾವಣಾ ಗುರುತಾಗಿ 'ಚಪ್ಪಲಿ' ಚಿನ್ಹೆ

ಮಾತು ಮಾತಿಗೂ 'ನನ್ ಮಗಂದ್ ನನ್ನ ಎಕ್ಕಡಾ' ಎನ್ನುತ್ತಿದ್ದ ನಟ, ನಿರ್ದೇಶಕ ಹುಚ್ಚಾ ವೆಂಕಟ್ ಚಪ್ಪಲಿಯನ್ನೇ ತಮ್ಮ ಚುನಾವಣಾ ಚಿನ್ಹೆಯಾಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಮಾತು ಮಾತಿಗೂ 'ನನ್ ಮಗಂದ್ ನನ್ನ ಎಕ್ಕಡಾ' ಎನ್ನುತ್ತಿದ್ದ ನಟ, ನಿರ್ದೇಶಕ ಹುಚ್ಚಾ ವೆಂಕಟ್ ಚಪ್ಪಲಿಯನ್ನೇ ತಮ್ಮ ಚುನಾವಣಾ ಚಿನ್ಹೆಯಾಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹುಚ್ಚಾವೆಂಕಟ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು. ಪಕ್ಷೇತರ ಅಭ್ಯರ್ಥಿಯಾಗಿರುವ ತಾವು ಚುನಾವಣಾ ಚಿನ್ಹೆಯಾಗಿ ಚಪ್ಪಲಿಯನ್ನು ಕೇಳಿದ್ದೆವು. ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿರುವ ಆಯೋಗ ಚಪ್ಪಲಿ ಚಿನ್ಹೆಯನ್ನೇ ಚುನಾವಣಾ ಗುರುತಾಗಿ ನೀಡಿದೆ ಎಂದು ಹೇಳಿದ್ದಾರೆ.
ಹುಚ್ಚಾ ವೆಂಕಟ್ ರಾಜರಾಜೇಶ್ವರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಈ ಹಿಂದೆ ನಾಮಪತ್ರ ಸಲ್ಲಿಕೆ ಮಾಡಿದ್ದರು. 
ಇದಕ್ಕೂ ಮೊದಲು ಕ್ಷೇತ್ರದಲ್ಲಿ ಕುಕ್ಕರ್ ಹಂಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟ್, ರಾಜರಾಜೇಶ್ವರಿ ನಗರದ ಶಾಸಕ ಹಾಗೂ ಚಿತ್ರ ನಿರ್ಮಾಪಕ ಮುನಿರತ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಾವು ನಮ್ಮ ಮತವನ್ನು ಮಾರಾಟಕ್ಕೆ ಇಟ್ಟಿಲ್ಲ. ಇಂತಹ ಆಮಿಷಗಳಿಗೆ ಬಗ್ಗುವುದಿಲ್ಲ ಎಂದು ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com