ರಾಜಕೀಯ

ನಿಮಗೆ ಕಮಿಷನ್ ಸರ್ಕಾರ ಬೇಕಾ? ಮಿಷನ್ ಸರ್ಕಾರ ಬೇಕಾ?: ಮೈಸೂರಿನಲ್ಲಿ ಪ್ರಧಾನಿ ಮೋದಿ

ನಿಮಗೆ ಕಮಿಷನ್ ಸರ್ಕಾರ ಬೇಕಾ? ಮಿಷನ್ ಸರ್ಕಾರ ಬೇಕಾ?: ಮೈಸೂರಿನಲ್ಲಿ ಪ್ರಧಾನಿ ಮೋದಿ
ನರೇಂದ್ರ ಮೋದಿ
Published On :
ಮೈಸೂರು: ನಿಮಗೆ ಕಮಿಷನ್ ಸರ್ಕಾರ ಬೇಕಾ ಅಥವಾ ಮಿಷನ್ ಸರ್ಕಾರ ಬೇಕಾ? ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಜ್ಯದ ಜನತೆಯನ್ನು ಪ್ರಶ್ನಿಸಿದ್ದಾರೆ.
ಇಂದು ಮೈಸೂರಿನ ಮಹಾರಾಜ ಕಾಲೇಜ್ ಮೈದಾನದಲ್ಲಿ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೆಲಸ ಮಾಡಲು ಶೇ.10ರಷ್ಟು ಕಮಿಷನ್ ಕೇಳುವ ಸರ್ಕಾರ ಬೇಕಾ ಅಥವಾ ಅಭಿವೃದ್ಧಿ ಮಾಡುವ ಮಿಷನ್ ಸರ್ಕಾರ ಬೇಕಾ? ಎಂಬುದನ್ನು ನೀವೇ ನಿರ್ಧರಿಸಿ ಎಂದರು.
ಮೈಸೂರಿನಲ್ಲಿ ವಿಶ್ವದರ್ಜೆಯ ರೈಲು ನಿಲ್ದಾಣ ನಿರ್ಮಾಣ ಮಾಡಲಾಗುವುದು ಮತ್ತು ಸುಮಾರು 70 ಹೆಚ್ಚು ಅತ್ಯಾಧುನಿಕ ರೈಲು ಇಲ್ಲಿಗೆ ಆಗಮಿಸಲಿವೆ ಎಂದು ಮೋದಿ ಹೇಳಿದ್ದರು.
ಈ ಹಿಂದಿನ‌ ಸರ್ಕಾರಗಳು ಜನರ ಕಣ್ಣಿಗೆ ಮಣ್ಣೆರೆರಚಿವೆ. ಹಿಂದೆ ಇಷ್ಟೊಂದು ಮೀಡಿಯಾ, ಎನ್ ಆರ್ ಐ ಮೊದಲಾದವು ಇರಲಿಲ್ಲ. ಅವರನ್ನು ಹೇಳುವವರು, ಕೇಳುವವರು ಇರಲಿಲ್ಲ. ರೈಲ್ವೆ ಬಜೆಟ್ ನಲ್ಲಿ ಘೋಷಣೆಯಾಗಿದ್ದ  9 ಲಕ್ಷ ರುಪಾಯಿಗಿಂತ ಹೆಚ್ಚು ಮೌಲ್ಯದ 15,00 ಯೋಜನೆಗಳು ಜಾರಿಯೇ ಆಗಿರಲಿಲ್ಲ. ಹಾಗಾಗಿಯೇ ಪ್ರತ್ಯೇಕ ರೈಲ್ವೆ ಬಜೆಟ್ ರದ್ದು ಮಾಡಿ, ಆಗ ಘೋಷಣೆಯಾಗಿದ್ದ ರೈಲ್ವೆ ಯೋಜನೆಗಳನ್ನು ಹುಡುಕಿ ಈಗ ಜಾರಿಗೊಳಿಸುತ್ತಿದ್ದೇವೆ ಎಂದರು. 
ಬೆಂಗಳೂರು-ಮೈಸೂರು ರೈಲ್ವೆ ವಿದ್ಯುದ್ದೀಕರಣ, ಮೈಸೂರು-ಉದಯಪುರ ಮೈಸೂರು ಕ್ವೀನ್ ರೈಲು ಲೋಕಾರ್ಪಣೆ ಮಾಡಿದ್ದೇವೆ. ರೈಲ್ವೆ ಆಧುನೀಕರಣ, ರೈಲ್ವೆ ಪ್ರಗತಿಯ ತೀವ್ರಗತಿಗೆ ಆದ್ಯತೆ ನೀಡಿದ್ದೇವೆ. ರೈಲ್ವೆ ಲೈನ್ ಡಬ್ಬಲ್ಲಿಂಗ್ ಅದರ ಒಂದು ಭಾಗ‌. ಬಡವರ ಅಭ್ಯುದಯಕ್ಕೆ ರೈಲ್ವೆ ಪ್ರಗತಿ ಅಗತ್ಯ. ನಾಲ್ಕು ವರ್ಷದಿಂದ ರೈಲ್ವೆ ಯೋಜನೆಗಳು ತೀವ್ರಗತಿ ಪಡೆದುಕೊಂಡಿದೆ ಎಂದು ಪ್ರಧಾನಿ ಹೇಳಿದರು. 
ಮೈಸೂರು-ಉದಯಪುರ ರೈಲು ಎರಡು ರಾಜ್ಯಗಳನ್ನು ಜೋಡಣೆ ಮಾಡುತ್ತದೆ. ಇದರಿಂದ ಕರ್ನಾಟಕ-ರಾಜಸ್ಥಾನಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಾಧ್ಯವಾಗುತ್ತದೆ ಎಂದರು.
ಇನ್ನು ಬೆಂಗಳೂರು-ಮೈಸೂರು 6 ಪಥದ ರಸ್ತೆ ಅಭಿವೃದ್ಧಿ ಯೋಜನೆ. ಸುಮಾರು 800 ಕೋಟಿ ರುಪಾಯಿ ವೆಚ್ಚದಲ್ಲಿ ಮೈಸೂರಿನ ನಾಗನಹಳ್ಳಿಯಲ್ಲಿ ವಿಶ್ವದರ್ಜೆಯ ಅತ್ಯಾಧುನಿಕ ಸ್ಯಾಟಲೈಟ್​ ರೈಲು ನಿಲ್ದಾಣ ನಿರ್ಮಾಣ ಮಾಡುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದರು.
ಪುಟ್ಟಣ್ಣಯ್ಯ ನಿಧನಕ್ಕೆ ಪ್ರಧಾನಿ ಸಂತಾಪ
ನಿನ್ನೆ ನಿಧನರಾದ ರೈತ ಮುಖಂಡ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ, ಪುಟ್ಟಣ್ಣಯ್ಯ ಅವರು ತಮ್ಮ ಜೀವನವನ್ನು ರೈತರಿಗಾಗಿ ಕಳೆದಿದ್ದಾರೆ ಎಂದು ಪ್ರಶಂಸಿದಿರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.