ನನ್ನ ಮನೆ ಮದುವೆ ಕಾರ್ಯಕ್ರಮಕ್ಕೆ ಕುಮಾರಸ್ವಾಮಿಯನ್ನ ಕರೆದಿಲ್ಲ; ರಾಜಣ್ಣ ಪುತ್ರನಿಗೆ HDK ಮನೆಯಲ್ಲಿ ಏನು ಕೆಲಸ? ಅಪ್ಪ-ಮಗನಿಗೆ ಬಾಲಕೃಷ್ಣ ನಿಷ್ಠೆ ಪಾಠ!

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗಿನ ಭೇಟಿ ಮತ್ತು ಮಾತುಕತೆಗಳ ವಿಚಾರವಾಗಿ ಕಾಂಗ್ರೆಸ್ ನಾಯಕರಾದ ರಾಜಣ್ಣ ಮತ್ತು ಬಾಲಕೃಷ್ಣ ನಡುವೆ ತೀವ್ರ ಮಾತಿನ ಚಕಮಕಿ ಮುಂದುವರಿದಿದೆ.
ರಾಮನಗರದಲ್ಲಿ ಜೊತೆ ಮಾತನಾಡಿದ ಸಚಿವ ಬಾಲಕೃಷ್ಣ, ನನ್ನ ಮನೆಯ ಮದುವೆ ಕಾರ್ಯಕ್ರಮಕ್ಕೂ ಕುಮಾರಸ್ವಾಮಿಯವರನ್ನು ಕರೆದಿಲ್ಲ. ಒಂದು ಪಕ್ಷ ಎಂದು ಗುರುತಿಸಿಕೊಂಡ ಮೇಲೆ ಪಕ್ಷದಲ್ಲಿ ಇರಬೇಕು. ಆದೇನೂ ಅಂದ್ರಲ್ಲ ಅದನ್ನು ನಾಳೆನೇ ಆಚೆ ಬಿಡಲು ಹೇಳಿ. ಇದೆಲ್ಲ ಬ್ಲ್ಯಾಕ್ ಮೇಲ್ ರಾಜಕಾರಣ. ಇರುವ ವಿಚಾರವನ್ನ ನೇರವಾಗಿ ಮಾತನಾಡಬೇಕು ಎಂದರು.
ಕುಮಾರಸ್ವಾಮಿ ಅವರ ಮನೆಗೆ ಅವರ ಮಗ ಯಾಕೆ ಹೋಗಿದ್ರು. ನಾನು ಕುಮಾರಸ್ವಾಮಿ ಮನೆಗೆ ಹೋಗುತ್ತೇನಾ? ಅವರ ಮಗನನ್ನ ಯಾಕೆ ಕುಮಾರಸ್ವಾಮಿ ಮನೆಗೆ ಕಳುಹಿಸಬೇಕು? ಎಂದು ಪ್ರಶ್ನಿಸಿದರು.
ಒಂದೇ ಕಡೆ ಇರಬೇಕು. ಇಲ್ಲ ಬಿಟ್ಟು ಹೋಗಬೇಕು. ಪಕ್ಷ ಸಂಘಟನೆ ಮಾಡಲಿ. ಅಹಿಂದ ಸಂಘಟನೆ ಅದೆಲ್ಲ ಏನು ಮಾಡಲು ಆಗಲ್ಲ. ಅಹಿಂದ ಸೇರಿದಂತೆ ಎಲ್ಲವೂ ಮುಖ್ಯ. ನಾನು ನೇರವಾಗಿ ಮಾತನಾಡುತ್ತೇನೆ ಅದಕ್ಕೆ ನನ್ನ ಮೇಲೆ ಕೋಪ. ನಾನು ರಾಜಣ್ಣ ಬಹಳ ಆತ್ಮೀಯರೇ. ಆದರೆ ಪಕ್ಷ ವಿರೋಧ ಚಟುವಟಿಕೆ ಬಗ್ಗೆ ನೇರವಾಗಿ ಮಾತನಾಡುತ್ತೇವೆ. ಕೆಲವರು ಗುಸು ಗುಸು ಎಂದು ಮಾತನಾಡುತ್ತಾರೆ ಎಂದು ನಯವಾಗಿಯೇ ರಾಜಣ್ಣಗೆ ಪಕ್ಷ ನಿಷ್ಠೆ ಪಾಠ ಮಾಡಿದರು.

ರಾಜ್ಯದಲ್ಲಿ ಯಾರ ಸರ್ಕಾರ ಬರಬೇಕೆಂದು ಜನ ತೀರ್ಮಾನಿಸುತ್ತಾರೆ; ದೇವೇಗೌಡರು ಅಥವಾ ರೇವಣ್ಣ ಅಲ್ಲ: HC ಬಾಲಕೃಷ್ಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


