ಎಐಸಿಸಿ ಸಾಮಾನ್ಯ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ನಾಯಕ ಕೆಸಿ ವೇಣುಗೋಪಾಲ್ ಅವರು ಅತೃಪ್ತ ನಾಯಕರನ್ನು ಸಮಾಧಾನಗೊಳಿಸಿದ್ದಾರೆಯಾದರೂ, ಅದು ತಾತ್ಕಾಲಿಕ ಮಾತ್ರ. ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ಹೈಕಮಾಂಡ್ ಎಚ್ಚರಿಕೆ ನೀಡಿದೆ. ಇದಾಗ್ಯೂ ಇದು ಶಾಶ್ವತ ಪರಿಹಾರವಲ್ಲ. ಏಕೆಂದರೆ ಮೈತ್ರಿ ಸರ್ಕಾರದಲ್ಲಿ ತಮಗೂ ಸ್ಥಾನಮಾನ ನೀಡಬೇಕು ಎಂದು ಇಂದಿಗೂ ಹತ್ತಾರು ಶಾಸಕರು ಕಾದು ಕುಳಿತಿದ್ದು, ಜೆಡಿಎಸ್ ನೊಂದಿಗೆ ಕಾಂಗ್ರೆಸ್ ಪಕ್ಷ ಈ ವರೆಗೂ ಅಧಿಕಾರ ಹಂಚಿಕೆ ಸೂತ್ರ ಮಾಡಿಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಮತ್ತೊಮ್ಮೆ ಭಿನ್ನಮತ ಸ್ಱೋಟವಾದರೂ ಅಚ್ಚರಿಯೇನಿಲ್ಲ.