ಸಂಘ ಪರಿವಾರ ರಾಜ್ಯ ಪ್ರಧಾನ ಕಾರ್ಯಾಲಯದಲ್ಲಿ ಕಳೆದ ಶನಿವಾರ ವಾರ್ಷಿಕ ಸಂಚಾಲನಾ ಸಭೆ ನಡೆಸಿತು. ಬಿ ಎಸ್ ಯಡಿಯೂರಪ್ಪ, ಅನಂತ ಕುಮಾರ್, ಸದಾನಂದ ಗೌಡ ಮತ್ತು ಇತರರು ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಘ ಪರಿವಾರದ ನೆರವನ್ನು ಅವರು ಕೋರಿದರು ಎಂದು ಆರ್‌ಎಸ್‌ಎಸ್ ಹಿರಿಯ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.