ಇನ್ನು ಈ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಎಂಬಿ ಪಾಟೀಲ್, 'ನನ್ನ ಮಗ ಅಮೆರಿಕದಲ್ಲಿ ಓದಿದ್ದು, ಅಲ್ಲಿಯೇ ನೆಲಸಲು ತಯಾರಿ ನಡೆಸುತ್ತಿರುವುದು ಹೌದು. ಆದರೆ, ನನ್ನ ಪತ್ನಿ ಅಂಥಹ ಯಾವುದೇ ಯೋಚನೆ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಆರೋಪಕ್ಕೆ ಸಂಬಂಧಿಸಿದಂತೆ ಮಾರ್ಚ್ 25ರಂದು ಖುದ್ದು ಪತ್ನಿ ಹಾಗೂ ಮಗ ಬಂದು ಸುವರ್ಣ ನ್ಯೂಸ್ ಮೂಲಕವೇ ಸ್ಪಷ್ಟನೆ ನೀಡಲಿದ್ದಾರೆಂದು ಪಾಟೀಲ್ ಅವರು ಹೇಳಿದ್ದಾರೆ.