ಕಾಂಗ್ರೆಸ್ ಸರ್ಕಾರ ಸಿಲಿಕಾನ್ ಸಿಟಿಯನ್ನು ಕ್ರೈಮ್ ಸಿಟಿಯನ್ನಾಗಿ ಮಾರ್ಪಡಿಸಿದೆ- ನರೇಂದ್ರ ಮೋದಿ ವಾಗ್ದಾಳಿ

ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿದ್ದ ಬೆಂಗಳೂರನ್ನು ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಅಪರಾಧಗಳ ನಗರವನ್ನಾಗಿ ಮಾರ್ಪಡಿಸಿದೆ ಎಂದು ಪ್ರಧಾನಿ ನರೇಂದ್ರಮೋದಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ
ಪ್ರಧಾನಿ ನರೇಂದ್ರಮೋದಿ

ಬೆಂಗಳೂರು : ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿದ್ದ ಬೆಂಗಳೂರನ್ನು ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಅಪರಾಧಗಳ ನಗರವನ್ನಾಗಿ ಮಾರ್ಪಡಿಸಿದೆ ಎಂದು ಪ್ರಧಾನಿ ನರೇಂದ್ರಮೋದಿ ವಾಗ್ದಾಳಿ ನಡೆಸಿದ್ದಾರೆ.

ಕೆಂಗೇರಿ  ಬಳಿಯಿಂದು ಆಯೋಜಿಸಿದ್ದ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು,  ಮುಖ್ಯಮಂತ್ರಿ ಸಿದ್ದರಾಮಯ್ಯ  ನೇತೃತ್ವದ ಸರ್ಕಾರ ಬೆಂಗಳೂರಿಗೆ  ಐದು ಉಡುಗೊರೆಗಳನ್ನು ನೀಡಿದೆ ಎಂದು ಹೇಳುವ ಮೂಲಕ ರಾಜ್ಯಸರ್ಕಾರದ ಆಡಳಿತ ವೈಖರಿ ವಿರುದ್ಧ ಕಿಡಿಕಾರಿದರು.

ಸಿಲಿಕಾನ್  ವ್ಯಾಲಿ ಪಾಪದ ಕಣಿವೆಯಾಗಿದೆ.  ಗಾರ್ಡನ್ ಸಿಟಿ ಗಾರ್ಬೇಟ್ ಸಿಟಿಯಾಗಿದೆ.  ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ. ಕಾಸ್ಮೋಪಾಲಿಟನ್ ಸಂಸ್ಕೃತಿ ಮರೆಯಾಗಿ ಗೂಂಡಾಗಿರಿ ಸಂಸ್ಕೃತಿಗೆ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.

ದೇಶದಾದ್ಯಂತ ಸ್ಮಾರ್ಟ್ ಸಿಟಿ  ಯೋಜನೆಯಡಿ ರಾಜ್ಯಗಳ ಅಭಿವೃದ್ದಿಗಾಗಿ  836 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.  ಆದರೆ, ಸಿದ್ದರಾಮಯ್ಯ ಸರ್ಕಾರ  12 ಕೋಟಿ ಯನ್ನು ಮಾತ್ರ ಖರ್ಚು ಮಾಡಿದ್ದು, ಉಳಿದ ಹಣವನ್ನು ಖರ್ಚು ಮಾಡೇ ಇಲ್ಲ , ಮಂತ್ರಿಗಳು ಹಾಗೂ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇಲಾಖೆ, ಇಲಾಖೆಗಳ ಮಧ್ಯೆಯ ಸ್ಪರ್ಧೆ ಏರ್ಪಟ್ಟಿದೆ ಎಂದು ಟೀಕಿಸಿದರು.

ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಬೆಳ್ಳಂದೂರಿನ ಕೆರೆಯಲ್ಲಿನ ನೊರೆ ಸಮಸ್ಯೆಯನ್ನು ಬಗೆಹರಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಒಂದು ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟರೆ ಕೆಂಪೇಗೌಡರ ಕಾಲದಲ್ಲಿನ ಆಡಳಿತದಂತೆ ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿದರು.

 ಕಾಂಗ್ರೆಸ್ ನ ಕೊನೆೇ ಕೋಟೆಯಾಗಿರುವ ಕರ್ನಾಟಕದಲ್ಲಿಯೂ ಬದಲಾವಣೆಯ ಗಾಳಿ ಬೀಸುತ್ತಿದೆ. ಎಲ್ಲಾ ಕಡೆ ಬಿಜೆಪಿಗೆ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಬಿಜೆಪಿಗೆ ಸ್ಪಷ್ಪ ಬಹುಮತ ದೊರೆತು ಮೇ 15 ರಂದು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಚುನಾವಣಾ ಸಮೀಕ್ಷೆಗಳೆಲ್ಲಾ ಬದಲಾಗಲಿದ್ದು, ಯಾವುದೇ ಕಾರಣಕ್ಕೂ ಜೆಡಿಎಸ್ ಸರ್ಕಾರ ರಚಿಸಲು ಸಾಧ್ಯವಿಲ್ಲ. ಕಾಂಗ್ರೆಸ್  ಸೋಲಿಸಲು ಬಿಜೆಪಿ ಮಾತ್ರ ಸಾಧ್ಯವಿದ್ದು, ಜೆಡಿಎಸ್ ತೃತೀಯ ಸ್ಥಾನದಲ್ಲಿ ಕುಂಟುತ್ತಾ ಸಾಗಬೇಕಿದೆ. ಆ ಪಕ್ಷಕ್ಕೆ ಮತ ಹಾಕಿ  ಮೌಲ್ಯ ಕಳೆದುಕೊಳ್ಳಲು ಅವಕಾಶ ಮಾಡಿಕೊಡಬೇಡಿ ಎಂದು ನರೇಂದ್ರಮೋದಿ ಜನತೆಯಲ್ಲಿ ಮನವಿ ಮಾಡಿಕೊಂಡರು.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com