ಸಚಿವ ಸಂಪುಟ ವಿಸ್ತರಣೆ ಕಸರತ್ತು: ಇಲ್ಲಿದೆ ಕಾಂಗ್ರೆಸ್ ಸಂಭಾವ್ಯ ಸಚಿವರ ಪಟ್ಟಿ!
ಗಜ ಪ್ರಸವದಂತಾಗಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮಯ ಒದಗಿ ಬಂದಂತೆ ಕಾಣುತ್ತಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿದೇಶ ಪ್ರವಾಸದಿಂದ ವಾಪಸಾದ ನಂತರ ಸಂಪುಟ ವಿಸ್ತರಣೆ ಕಸರತ್ತು ಮುಂದುವರಿಯಲಿದೆ.
ಲಕ್ಷ್ಮಿ ಹೆಬ್ಬಾಳ್ಕರ್ , ಎಂಟಿಬಿ ನಾಗರಾಜ್ ಮತ್ತು ಪರಮೇಶ್ವರ್ ನಾಯಕ್
ಬೆಂಗಳೂರು: ಗಜ ಪ್ರಸವದಂತಾಗಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮಯ ಒದಗಿ ಬಂದಂತೆ ಕಾಣುತ್ತಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿದೇಶ ಪ್ರವಾಸದಿಂದ ವಾಪಸಾದ ನಂತರ ಸಂಪುಟ ವಿಸ್ತರಣೆ ಕಸರತ್ತು ಮುಂದುವರಿಯಲಿದೆ.
ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ಮುಗಿಸಿ ಬಂದಿರುವ ಸಿದ್ದರಾಮಯ್ಯ ದಿನೇಶ್ ವಾಪಾಸಾದ ನಂತರ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲಿದ್ದಾರೆ. ಜಾತಿ ಲೆಕ್ಕಾಚಾರ, ಅಪಾಯದ ಅಂಶಗಳು, ಜಿಲ್ಲಾವಾರು ಪ್ರಾತಿನಿದ್ಯ, ಮತ್ತು ಅಸಮಾಧಾನಿತರನ್ನು ಸಮಾಧಾನಗೊಳಿಸುವ ಸಂಬಂಧ ಗುರುವಾರ ನಡೆಯುವ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.
ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಜಿ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅವರನ್ನೊಳಗೊಂಡ ಸಭೆಯಲ್ಲಿ ಕೆಲವು ಶಾಸಕರ ಪಟ್ಟಿ ತಯಾರಿಸಿ ಹೈಕಮಾಂಡ್ ಗೆ ಕಳುಹಿಸಲಾಗಿತ್ತು. ಉತ್ತರ ಕರ್ನಾಟಕ ಭಾಗಕ್ಕೆ ಸೂಕ್ತ ಸ್ತಾನಮಾನ ಸಿಗದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿತ್ತು, ಹೀಗಾಗಿ ಈ ಬಾರಿ ಸಂಪುಟ ವಿಸ್ತರಣೆ ವೇಳೆ ಉತ್ತರ ಕರ್ನಾಟಕ ಮತ್ತು ಕೇಂದ್ರ ಕರ್ನಾಟಕಕ್ಕೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ಪಕ್ಷದ ನಾಯಕರ ಒತ್ತಾಯದಂತೆ, ಒಬ್ಬ ಮುಸ್ಲಿಂ, ಇಬ್ಬರು ಲಿಂಗಾಯತರು, ಮತ್ತು ಒಂದು ಎಸ್ ಸಿ, ಅಥವ್ ಲಂಬಾಣಿ ಸಮುದಾಯ ಹಾಗೂ ಒಂದು ಎಸ್ ಟಿ, ಜೊತೆಗೆ ಒಂದು ಎಡ ಮತ್ತ ಕುರುಬ ಸಮುದಾಯಕ್ಕೆ ಒಬ್ಬ ಶಾಸಕರನ್ನು ಸಂಪುಟ ವಿಸ್ತರಣೆಯಲ್ಲಿ ಪರಿಗಣಿಸಬೇಕು ಎಂಬ ಮಾತುಗಳು ಕೇಳಿ ಬಂದಿವೆ.
ಕುರುಬ ಸಮುದಾಯಕ್ಕೆ ಸೇರಿದ ಶಿವಳ್ಳಿ ಮತ್ತು ಎಂಟಿಬಿ ನಾಗರಾಜ್ ,ಪರಮೇಶ್ವರ್ ನಾಯಕ್ ಮತ್ತು ಎಸ್ ಟಿ ಖೋಟಾದಲ್ಲಿ ಬಿ ನಾಗೇಂದ್ರ, ಅವರ ನಡುವೇ ಪೈಪೋಟಿ ಏರ್ಪಟ್ಟಿದೆ. ಮೊದಲ ಬಾರಿಗೆ ಶಾಸಕಿಯಾಗಿರುವ ಲಿಂಗಾಯತ ಸಮುದಾಯಕ್ಕೆ ಸೇರಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ಎಸ್ ಟಿ ಎಡ ಪಂಥದ ರೂಪಾ ಶಶಿಧರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ.