ಹೆಚ್ಚಿನ ಅಧಿಕಾರ ಬೇಕೆ? ಹಾಗಿದ್ದರೇ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಿ: ಜಿಲ್ಲಾಧ್ಯಕ್ಷರಿಗೆ ರಾಹುಲ್ ಸಲಹೆ

Published On :
ಬೆಂಗಳೂರು: ಹೆಚ್ಚಿನ ಅಧಿಕಾರ ಬೇಕೆ? ಅದಕ್ಕಾಗಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಿ, ಇದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಎಲ್ಲಾ ಜಿಲ್ಲಾ ಅಧ್ಯಕ್ಷರಿಗೂ ಸಲಹೆ ನೀಡಿದ್ದಾರೆ.
ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ರಾಜ್ಯದ ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜೊತೆಗೆ ವಿಡಿಯೋ ಸಂವಾದ ನಡೆಸಿದ್ದಾರೆ.
ಜಿಲ್ಲಾ ಹಾಗೂ ಬ್ಲಾಕ್ ಘಟಕದ ಅಧ್ಯಕ್ಷರಿಗೆ ಮೂರು ಅಂಶಗಳ ಅಜೆಂಡಾ ನೀಡಿದ್ದಾರೆ, ಮೊದಲಿಗೆ ಪಕ್ಷ ತಳಮಟ್ಟದಲ್ಲಿ ಬಲಿಷ್ಠವಾಗಬೇಕು, ನಮ್ಮಲ್ಲಿ ತುಂಬಾ ಅಶಿಸ್ತು ಇದೆ, ಇದು ಪ್ರತಿಯೊಬ್ಬರಿಗೂ ತಿಳಿದಿದೆ, ಜಿಲ್ಲಾ ಸಮಿತಿ ಹೆಚ್ಚಿನ ಹೊಣೆಗಾರಿಕೆ ತೆಗೆದುಕೊಳ್ಳಬೇಕು, ಜೊತೆಗೆ ಜಿಲ್ಲಾ ಘಟಕಗಳ ಜೊತೆ ಸಮನ್ವಯ ಹಾಗೂ ಸಹಕಾರದಿಂದ ಇರಬೇಕು, ಶಿಸ್ತಿನ ಹೊರತಾಗಿ ಪ್ರತಿಜಿಲ್ಲೆ ಅಧ್ಯಕ್ಷರು ಸಭೆ ನಡೆಸಬೇಕು, ಸಭೆ ನಡೆಸಿದ್ದರ ಬಗ್ಗೆ ದಾಖಲಾತಿಗಳನ್ನು ನೀಡಬೇಕು ಎಂದು ಹೇಳಿದ್ದಾರೆ.
ಮೂರನೇ ಪ್ರಮುಖ ಅಜೆಂಡಾ ಸಂವಹನ ಮತ್ತು ಪ್ರಾತಿನಿಧ್ಯ ಪ್ರಮುಖವಾಗಿದೆ, ಜೊತೆಗೆ ಸ್ಥಳೀಯ ಜಿಲ್ಲಾ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಕರಣಗಳ ಬಗ್ಗೆ ಚರ್ಚಿಸಿ, ತಮ್ಮ ಅಭಿಪ್ರಾಯವನ್ನು ಪ್ರದೇಶ ಕಾಂಗ್ರೆಸ್ ಸಮಿತಿಗೆ ತಿಳಿಸಬೇಕು ಎಂದು ತಿಳಿಸಿದ್ದಾರೆ.
ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲ ಪಡಿಸಬೇಕು. ಶೀಘ್ರವೇ ಇದಕ್ಕಾಗಿ ಶಕ್ತಿ ಪ್ರಾಜೆಕ್ಟ್ ಲಾಂಚ್ ಮಾಡಲಾಗುವುದು, ಇದು ಸದಸ್ಯತ್ವ ನೋಂದಣಿ ಕಾರ್ಯವಾಗಿದೆ, ನೇಮಕಾತಿ ಹಾಗೂ ಬೂತ್ ಮಟ್ಟದಲ್ಲಿ ವರದಿ ನೀಡಬೇಕು. ಹಾಗಾಗಿ ಜಿಲ್ಲಾ ಘಟಕಗಳು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳೂಬೇಕಾಗಿದೆ ಎಂದು ಹೇಳಿದ್ದಾರೆ.
ನಿಮಗೆ ಹಕ್ಕುಗಳಿವೆ ಹಾಗೆಯೇ ಜವಾಬ್ದಾರಿಗಳು ಕೂಡ ಇವೆ,ನಿಮ್ಮ ಹೊಣೆಗಾರಿಕೆಗಳನ್ನ ಪೂರ್ಣಗೊಳಿಸಿದಾಗ ನಿಮಗೆ ನಿಮ್ಮ ಹಕ್ಕು ಸಿಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


