ರಾಫೆಲ್ ಯುದ್ಧ ವಿಮಾನ ಸಿದ್ಧಪಡಿಸುವ ಹೊಣೆಯನ್ನು ಎಚ್‌ಎಎಲ್‌ಗೆ ವಹಿಸಲು ಯುಪಿಎ ಅವಧಿಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಕೇಂದ್ರ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಈ ಒಪ್ಪಂದವನ್ನು ಮುರಿದು ರಿಲಯನ್ಸ್‌ಗೆ ರಾಫೇಲ್ ಡೀಲ್ ಕೊಡಿಸಿರುವುದಾಗಿ ರಾಹುಲ್ ಗಾಂಧಿ ಆರೋಪಿಸಿದ್ದರು. ಇದರ ಬೆನ್ನಿಗೇ ಎಚ್‌ಎಎಲ್ ನೌಕರರೊಂದಿಗೆ ಸಂವಾದ ನಡೆಸಲು ರಾಹುಲ್ ಮುಂದಾಗಿರುವುದು ಈ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಲಿದೆಯೇ ಎಂಬ ಪ್ರಶ್ನೆ ಮೂಡುವಂತಾಗಿದೆ.