ಉಪಚುನಾವಣೆಗೆ ಅಖಾಡ ಸಿದ್ದ: ಗಣಿನಾಡಲ್ಲಿ ಭಿನ್ನಮತ ಶಮನ; ಶಿವಮೊಗ್ಗದಲ್ಲಿ ಒಗ್ಗಟ್ಟು ಪ್ರದರ್ಶನ

ನವೆಂಬರ್ 3 ರಂದು ನಡೆಯುವ ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆಗೆ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಸ್ಟಾರ್ ಗಳು ...
ಉಪಟುನಾವಣೆ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಉಪಟುನಾವಣೆ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
Updated on: 
ಬೆಂಗಳೂರು: ನವೆಂಬರ್ 3 ರಂದು ನಡೆಯುವ ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆಗೆ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು,  ಸ್ಟಾರ್ ಗಳು ಈಗಾಗಲೇ ಪ್ರಚಾರ ಕಾರ್ಯಕ್ಕೆ ಸಿದ್ದರಾಗಿದ್ದಾರೆ,
ಗಣಿನಾಡು ಬಳ್ಳಾರಿಯಲ್ಲಿ ಶ್ರೀರಾಮುಲು ಸಹೋದರಿ ಜೆ, ಶಾಂತಾ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಗ್ರಪ್ಪ ಕಣಕ್ಕಿಳಿದಿದ್ದಾರೆ, ಶಿವಮೊಗ್ಗದಿಂದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಜೆಡಿಎಸ್ ನ ಮಧು ಬಂಗಾರಪ್ಪ ಸಮರ ಸಾರಿದ್ದಾರೆ, ಇನ್ನೂ ರಾಮನಗರದಲ್ಲಿ ಸಿಎಂ ಕುಮಾರ ಸ್ವಾಮಿ ಪತ್ನಿ ಅನಿತಾ ವಿರುದ್ಧ ಎಂಎಲ್ ಸಿ ಸಿಎಂ ಲಿಂಗಪ್ಪ ಪುತ್ರ ಚಂದ್ರಶೇಖರ್ ಹಾಗೂ ಮಂಡ್ಯದಲ್ಲಿ ಜೆಡಿಎಸ್ ನ ಎಲ್,ಆರ್ ಶಿವರಾಮೇಗೌಡ ವಿರುದ್ದ ಬಿಜೆಪಿಯ  ಬಿಜೆಪಿಯ ಸಿದ್ದರಾಮಯ್ಯ, ಹಾಗೂ ಜಮಖಂಡಿಯಲ್ಲಿ ಕಾಂಗ್ರೆಸ್ ನ ಆನಂದ ನ್ಯಾಮಗೌಡ ವಿರುದ್ಧ ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ನಾಮ ಪತ್ರ ಸಲ್ಲಿಸಿದ್ದಾರೆ.
ಬುಧವಾರ ನಾಮಪತ್ರ ಪರಿಶೀಲನೆ ಇದೆ, ಅಕ್ಟೋಬರ್ 20 ನಾಮಪತ್ರ ವಾಪಸ್ ತೆಗೆದುಕೊಳ್ಳಲು ಕೊನೆಯ ದಿನವಾಗಿದೆ,ನಾಮಪತ್ರ ಸಲ್ಲಿಕೆ ಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಮಾರ್ಪಡಿಸಿದ್ದರು. ಎರಡುಪ ಪಕ್ಷಗಳು ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಿವೆ. 
ಬಳ್ಳಾರಿಯಲ್ಲಿ ನಾಮಪತ್ರ ಸಲ್ಲಿಸಿದ ಉಗ್ರಪ್ಪ ಅವರಿಗೆ ಡಿ,ಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಅಲ್ಲಂ ವೀರಭದ್ರಪ್ಪ ಸಾಥ್ ನೀಡಿದ್ದರು. ಇನ್ನೂ ಬಿಜೆಪಿಯ ಶಾಂತಾ ಅವರ ಜೊತೆಯಲ್ಲಿ ಸಹೋದರ ಬಿ, ಶ್ರೀರಾಮುಲು ಹಾಗೂ ಸೋಮಶೇಖರ ರೆಡ್ಡಿ ಜೊತೆಯಾಗಿ ಮೆರವಣಿಗೆ ನಡೆಸಿ ನಂತರ  ನಾಮಪತ್ರ ಸಲ್ಲಿಸಿದರು.ಈ ವೇಳೆ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಒದಗಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ,ಕೆ ಶಿವಕುಮಾರ್ ಮತ್ತು ಶ್ರೀರಾಮುಲು ಪ್ರತಿಷ್ಠೆಯ ಹೋರಾಟವಾಗಿದೆ. ಇದು ಬಳ್ಳಾರಿ ಮಗಳು ಹಾಗೂ ಹೊರಗಿನವರ ನಡುವಿನ ಕನದವಾಗಿದೆ, ಬಳ್ಳಾರಿಗೆ ಹೊರಗಿನ ಜಿಲ್ಲೆಯಿಂದ ಬಂದವರು ಅಧಿಪತ್ಯ ಸ್ಥಾಪಿಸಲು ಮುಂದಾಗಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಳು ಒಂದಾಗಿ ಒಗ್ಗಟ್ಟು ಪ್ರದರ್ಶಿಸಿವೆ, ಸಿಎಂ ಕುಮಾರ ಸ್ವಾಮಿ ಅವರನ್ನು ಹೊರತು ಪಡಿಸಿ, ಕಾಂಗ್ರೆಸ್ ನಾಯಕರುಗಳಾದ,  ಆರ್.ವಿ ದೇಶಪಾಂಡೆ, ಕಾಗೋಡು ತಿಮ್ಮಪ್ಪ,  ಕಿಮ್ಮನೆ ರತ್ನಾಕರ, ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು, ಇನ್ನೂ ಜಮಖಂಡಿಯಲ್ಲಿ  ಆನಂದ ನ್ಯಾಮಗೌಡ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com