ರಾಮನಗರದಲ್ಲಿ ಇಬ್ಬರ ಜಗಳ ಮೂರನೆಯವರಿಗೆ ಲಾಭ: ಜೆಡಿಎಸ್-ಕಾಂಗ್ರೆಸ್ ಕಲಹ, ಕಮಲಕ್ಕೆ ವರದಾನ!

ಕಳೆದ ಮೂರು ದಶಕಗಳಿಂದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ರಾಮನಗರ ವಿಧಾನ ಸಭೆ ಕ್ಷೇತ್ರದಿಂದ...
ಚಂದ್ರಶೇಖರ್ ಮತ್ತು ಅನಿತಾ ಕುಮಾರಸ್ವಾಮಿ
ಚಂದ್ರಶೇಖರ್ ಮತ್ತು ಅನಿತಾ ಕುಮಾರಸ್ವಾಮಿ
Updated on: 
ರಾಮನಗರ: ಕಳೆದ ಮೂರು ದಶಕಗಳಿಂದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಕುಟುಂಬದ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ರಾಮನಗರ ವಿಧಾನ ಸಭೆ ಕ್ಷೇತ್ರದಿಂದ  ಜೆಡಿಎಸ್ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ನವೆಂಬರ್ 3 ರಂದು ನಡೆಯುವ ಉಪಚುನಾವಣೆಯಲ್ಲಿ ಗೆಲ್ಲುವ ಆತ್ಮ ವಿಶ್ವಾಸದಲ್ಲಿದ್ದಾರೆ.
ರಾಜ್ಯಕ್ಕೆ ಮೂರು ಮುಖ್ಯಮಂತ್ರಿಗಳನ್ನು ನೀಡಿರುವ ಜೆಡಿಎಸ್ ಕರ್ಮಭೂಮಿ ರಾಮನಗರ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರವಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಯುದ್ದ ಭೂಮಿಯಾಗಿದೆ, ಆದರೆ ಅನಿತಾ ಕುಮಾರಸ್ವಾಮಿ ಪರ ಪ್ರಚಾರ ನಡೆಸಿ ಗೆಲ್ಲಿಸಬೇಕೆಂಬ ಹೈಕಮಾಂಡ್ ಆದೇಶದಿದಂದಾಗಿ ಅಸಮಾಧಾನಗೊಂಡಿದ್ದ ಕೆಲವು ಸ್ಥಳೀಯ ನಾಯಕರು ಸುಮ್ಮನಾಗಿದ್ದಾರೆ.
ಆದರೆ ಬಲವಂತವಾಗಿ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲು ಇಷ್ಟಪಡದ ಎಂಎಲ್ ಸಿ ಸಿಎಂ ಲಿಂಗಪ್ಪ ಅನಿತಾ ವಿರುದ್ಧ ತಮ್ಮ ಪುತ್ರ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಿದ್ದಾರೆ,. ಆದರೆ ಲಿಂಗಪ್ಪ ಅವರಿಗೆ ಕಾಂಗ್ರೆಸ್ ಬಳ್ಳಾರಿ ಚುನಾವಣೆಯ ಉಸ್ತುವಾರಿ ವಹಿಸಿದೆ.
ಇನ್ನೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರ ಸ್ವಾನಿ ವಿರುದ್ಧ ರಾಮನಗರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ  ಇಕ್ಬಾಲ್ ಹುಸೇನ್ ಕೂಡ ತಮಗೆ ಟಿಕೆಟ್ ನೀಡದ್ದಕ್ಕೆ ಅಸಮಾಧಾನಗೊಂಡಿದ್ದಾರೆ, ಈ ಎಲ್ಲಾ ಅಂಶಗಳು ರಾಮನಗರದಲ್ಲಿ ಭದ್ರ ತಳಹಧಿ ಕಂಡುಕೊಳ್ಳಲು ಯತ್ನಿಸುತ್ತಿರುವ ಬಿಜೆಪಿಗೆ  ಸಹಾಯವಾಗಲಿದೆ. 
ಆದರೆ ದೇವೇಗೌಡ ಮತ್ತು ಕುಮಾರಸ್ವಾಮಿ ರಾಮನಗರದಲ್ಲಿ ಉತ್ತಮ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ ಎಂದು ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಜನ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಹೇಳಿದ್ದಾರೆ,
ನಾವು ಬಹಳ ಕಾಲದಿಂದಲೂ ಜೆಡಿಎಸ್ ಗೆ ವೋಟ್ ಹಾಕುತ್ತಾ ಬಂದಿದ್ದೆವು. ಈ ಹಿಂದೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ, ರಾಮನಗರವನ್ನು ಜಿಲ್ಲೆ ಎಂದು ಘೋಷಿಸಿದರು, ಆದರೆ ಹೇಳಿಕೊಳ್ಳುವಂತ ಮಟ್ಟದ ಅಭಿವೃದ್ಧಿ ಕಾಣಲಿಲ್ಲ.ಈಗ ಕುಮಾರಸ್ವಾಮಿ ಮತ್ತೆ ಸಿಎಂ ಆಗಿರುವುದರಿಂದ ಹೆಚ್ಚಿನ ಅಭಿವೃದ್ಧಿ ನಿರೀಕ್ಷಿಸಲಾಗಿದೆ, ಕುಮಾರಸ್ವಾಮಿ ಸಿಎಂ ಆಗಿರುವುದು ಕೂಡ ಅನಿತಾ ಗೆಲುವಿಗೆ ಸಹಾಯ.ವಾಗಲಿದೆ ಎಂದು ಬೇವೂರು ಗ್ರಾಮದ ದೊಡ್ಡ ಬೀರಯ್ಯ ಹೇಳಿದ್ದಾರೆ,
ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ಉತ್ತಮ ಪಕ್ಷ ಸಂಘಟನೆ ಇಲ್ಲದಿರುವುದು ಬಿಜೆಪಿ ಗೆ ಚುನಾವಣೆಯಲ್ಲಿ ಹಿನ್ನೆಡೆಯಾಗಲು ಕಾರಣವಾಯ್ತು.  ಬಿಜೆಪಿ ಅಭ್ಯರ್ಥಿ ಲೀಲಾವತಿ ಕೇವಲ 4,871 ಮತಗಳಿಸಿದ್ದರು, ಕಾಂಗ್ರೆಸ್ ನ ಇಕ್ಬಾಲ್ ಅನ್ಸಾರಿ 69,990 ಮತಗಳಿಸಿ ಕುಮಾರಸ್ವಾಮಿಗೆ ತೀವ್ರ ಪೈಪೋಟಿ ನೀಡಿದ್ದರು,
ನಮಗೆ ಬದಲಾವಣೆ ಬೇಕು, ದೇವೇಗೌಡ ಕುಟುಂಬದವರಿಗೆ ಮತಹಾಕಿ ಗೆಲ್ಲಿಸಿದ್ದರಿಂದ ನಮ್ಮ ಜೀವನದಲ್ಲಿ ಯಾವುದೇ ವ್ಯತ್ಯಸವಾಗಿಲ್ಲ, ನಮಗೂ ಬದಲಾವಣೆ ಬೇಕಾಗಿದೆ, ಬಿಜೆಪಿ ನಿಧಾನವಾಗಿ ತನ್ನ ಅಸ್ಠಿತ್ವ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸ್ಥಳೀಯ ವಾಸಿ ಸಿದ್ದೇಶ್ ಎಂಬುವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com