ರಾಜಕೀಯ

2028ಕ್ಕೆ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲ್ಲ: ಅಚ್ಚರಿ ಹೇಳಿಕೆ ನೀಡಿದ ಶಾಸಕ ಎಸ್.ಟಿ.ಸೋಮಶೇಖರ್

2028ಕ್ಕೆ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲ್ಲ: ಅಚ್ಚರಿ ಹೇಳಿಕೆ ನೀಡಿದ ಶಾಸಕ ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್
Published On :

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ವಿಚಾರವಾಗಿ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. 2028ರಲ್ಲಿ ವಿಧಾನಸಭಾ ಚುನಾವಣೆ ನಡೆಯಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿನ ಸರ್ಕಾರದ ಅವಧಿ 2028ಕ್ಕೆ ಅಂತ್ಯವಾಗಲಿದ್ದು, ಬಳಿಕ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಆದರೆ ಈ ಬಾರಿ 2028ರಲ್ಲಿ ಎಲೆಕ್ಷನ್ ನಡೆಯಲ್ಲ. ಬದಲಿಗೆ 2029ರಲ್ಲಿ ನಡೆಯಲಿದೆ ಎಂದರು

ಇನ್ನೂ ಬಿಜೆಪಿ – ಜೆಡಿಎಸ್ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಸೋಮಶೇಖರ್, ಬಿಜೆಪಿ ಜೆಡಿಎಸ್ ನಮಗೆ ಸಂಬಂಧ ಇಲ್ಲ. ನಾನ್ಯಾಕೆ ಸಭೆಗೆ ಹೋಗಲಿ. 2029ಕ್ಕೆ ಚುನಾವಣೆ ಇದೆ . 2028ಕ್ಕೆ ಇವರು ಚುನಾವಣೆ ಮಾಡಲ್ಲ . ಡಿ ಲಿಮಿಟೇಶನ್ ಗೆ ಅಂತ ಇದೆ. ಅದಕ್ಕೆ ಪ್ರಧಾನಮಂತ್ರಿಗಳು ಹೇಳಿದ್ದಾರಲ್ಲ. ಅದಕ್ಕಾಗಿ ಈಗ ಅರ್ಜೆಂಟ್ ಏನಿದೆ? ಎಂದರು.

ಸಿಎಂ ಡಿಕೆ ಶಿವಕುಮಾರ್ ನನಗೆ 25 ವರ್ಷದಿಂದ ಆತ್ಮೀಯರಾಗಿದ್ದು, ರಾಜಕೀಯಕ್ಕೆ ಅವರು ಸಹಕಾರ ಕೊಟ್ಟಿದಾರೆ. ಸಹಕಾರ ಕ್ಷೇತ್ರದಲ್ಲೂ ಅವರು ಸಹಕಾರ ಕೊಟ್ಟಿದಾರೆ. ಅವತ್ತಿನಿಂದ ಇವತ್ತಿನವರೆಗೂ ಅವರು ಅದೇ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಾನು ಕೂಡ ಅದೇ ವಿಶ್ವಾಸ ಇಟ್ಟುಕೊಂಡಿದ್ದೇನೆ ಎಂದರು.

ಕುಮಾರಸ್ವಾಮಿ ಅವರು ಹಸು ಭಾಗ್ಯ ಘೋಷಿಸಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸೋಮಶೇಖರ್, ಕೊನೆಪಕ್ಷ ಅದನ್ನಾದರೂ ಘೋಷಣೆ ಮಾಡಿದ್ದಾರಲ್ಲ. ನನ್ನ ಕ್ಷೇತ್ರದಲ್ಲಿ 15 ಸಾವಿರ ಮಹಿಳೆಯರು ಹಾಲನ್ನು ಹಾಕುತ್ತಾರೆ. 93 ಸೊಸೈಟಿಗಳಿವೆ., ಎಲ್ಲಾ ಸೊಸೈಟಿಗೂ ಅನುದಾನ ಕೊಟ್ಟಿದ್ದೇನೆ. ಎಷ್ಟು ಅನುದಾನ ಕೊಟ್ಟರು ಹಸುಗಳನ್ನು ಮೆಂಟೇನ್ ಮಾಡಲು ಆಗುತ್ತಿಲ್ಲ. ಈಗ ರೈತರಿಗೆ ಹಾಲಿಗೆ ಲೀಟರ್ ಗೆ 7 ರೂ. ಹೆಚ್ಚಳ ಮಾಡಿದರೂ ಕೂಡ ಹಸುಗಳನ್ನು ಮೇಂಟೇನ್ ಮಾಡುವುದು ಕಷ್ಟ ಎಂದು ತಿಳಿಸಿದರು.

ಹಸುಗಳಿಗೆ ಮೇವು, ಆರೋಗ್ಯ, ಎಲ್ಲ ದೃಷ್ಟಿಯಿಂದ ನೋಡಿದರೆ ಈ ಕಾಲದಲ್ಲಿ ಹಸು, ದನಗಳನ್ನು ಸಾಕುವುದು ಬಹಳ ಕಷ್ಟವಿದೆ. ಸೊಸೈಟಿಗಳ ಉದ್ಘಾಟನೆ ವೇಳೆ ನಾನು ನನ್ನ ಕ್ಷೇತ್ರದಲ್ಲಿಯೇ ಬಹಳ ಹತ್ತಿರದಿಂದ ರೈತರ ಸಂಕಷ್ಟ ನೋಡಿದ್ದೇನೆ. 15 ರೂ. ಕೊಟ್ಟರು ಕೂಡ ಹಸುಗಳನ್ನು ಸಾಕಿ ಸಲಹಲು ಸಾಲುವುದಿಲ್ಲ. ಅಷ್ಟು ಕಷ್ಟಗಳಿವೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.