'ನಿಮ್ಮ‌ ಪಾಪಗಳಿಗಾಗಿ‌ ದೇವರು ನಿಮ್ಮ ಮಕ್ಕಳಿಗೆ ಶಿಕ್ಷೆ ನೀಡದಿರಲಿ': ರೆಡ್ಡಿಗೆ ಸಿದ್ದು ಟಾಂಗ್

ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಸಾವಿನ ಕುರಿತಂತೆ ಪರೋಕ್ಷ ವ್ಯಂಗ್ಯ ಮಾಡಿದ್ದ ಬಿಜೆಪಿ ಮಾಜಿ ಸಚಿವ ಜನಾರ್ಧನ್ ರೆಡ್ಡಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದಾಮಯ್ಯ ಗಣಿಧಣಿಗೆ ಮಾನಲೀಯತೆಯ ಪಾಠ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಸಾವಿನ ಕುರಿತಂತೆ ಪರೋಕ್ಷ ವ್ಯಂಗ್ಯ ಮಾಡಿದ್ದ ಬಿಜೆಪಿ ಮಾಜಿ ಸಚಿವ ಜನಾರ್ಧನ್ ರೆಡ್ಡಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದಾಮಯ್ಯ ಗಣಿಧಣಿಗೆ ಮಾನವೀಯತೆಯ ಪಾಠ ಮಾಡಿದ್ದಾರೆ.
ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಜನಾರ್ಧನ ರೆಡ್ಡಿ, ನನ್ನ ಮಕ್ಕಳಿಂದ ನನ್ನನ್ನು ದೂರ ಮಾಡಿದ್ದಕ್ಕೇ ಸಿದ್ದರಾಮಯ್ಯ ಅವರಿಗೆ ಶಿಕ್ಷೆಯಾಗಿದೆ. ನಾವು ಮಾಡಿದ ಪಾಪ ನಮ್ಮ ಮಕ್ಕಳನ್ನು ಕಾಡುತ್ತದೆ ಎಂಬಂತೆ ಅವರ ಪುತ್ರ ಸಾವನ್ನಪ್ಪಿದ. ಇನ್ನಾದರೂ ಸಿದ್ದರಾಮಯ್ಯ ಬುದ್ದಿ ಕಲಿಯಲಿ ಎಂದು ರೆಡ್ಡಿ ಹೇಳಿದ್ದರು. ರೆಡ್ಡಿ ಹೇಳಿಕೆಗೆ ಬಿಜೆಪಿ ವಲಯದಲ್ಲೇ ಆಕ್ಷೇಪ ಕೇಳಿಬಂದಿತ್ತು.
ಇದೀಗ ರೆಡ್ಡಿ ಹೇಳಿಕೆಗೆ ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಉತ್ತರ ನೀಡಿದ್ದ, ನನ್ನ ಮಗನ ಸಾವು ನನಗೆ ದೇವರು‌ಕೊಟ್ಟ ಶಿಕ್ಷೆ‌‌ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ನಿಮ್ಮ‌ ಪಾಪಗಳಿಗಾಗಿ‌ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಜನಾರ್ಧನ ರೆಡ್ಡಿ ಅವರಿಗೆ ಮಾನವೀಯತೆಯ ಪಾಠ ಮಾಡಿದ್ದಾರೆ.
ಅಷ್ಟು ಮಾತ್ರವಲ್ಲದೆ ಈ ಹಿಂದೆ ಸಂಸದ ಪ್ರತಾಪ್ ಸಿಂಹ ಪತ್ರಕರ್ತರಾಗಿದ್ದ ಸಂದರ್ಭದಲ್ಲಿ ಜನಾರ್ಧನ ರೆಡ್ಡಿ ಅಕ್ರಮ ಗಣಿಗಾರಿಕೆ ಕುರಿತು ಬರೆದಿದ್ದ ಲೇಖನ ಉಲ್ಲೇಖ ಮಾಡಿ ಟೀಕಿಸಿದ್ದಾರೆ. 'ಜನಾರ್ಧನ ರೆಡ್ಡಿಯವರೇ, ನಿಮ್ಮ ಜತೆಗಿನ ಚರ್ಚೆಯಲ್ಲಿ ನಾನು ಕೇಳಬೇಕೆಂದಿದ್ದ ಪ್ರಶ್ನೆಗಳನ್ನು ನಿಮ್ಮ ಸಂಸದರೇ ಕೇಳಿಬಿಟ್ಟಿದ್ದಾರೆ. ಚರ್ಚೆಗೆ ಬರುವ ಮೊದಲು ಅವರ ಪುಸ್ತಕವನ್ನೂ ಓದ್ಕೊಂಡು ಬನ್ನಿ ಎಂದು ವ್ಯಂಗ್ಯ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com