ದೇವೇಗೌಡರ ಆರೋಪದಲ್ಲಿ ಹುರುಳಿಲ್ಲ- ದಿನೇಶ್ ಗುಂಡೂರಾವ್

ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮಾಡಿರುವ ಆರೋಪವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಲ್ಲಗಳೆದಿದ್ದಾರೆ.
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
Updated on: 

ಬೆಂಗಳೂರು: ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಕಾರಣ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಮಾಡಿರುವ ಆರೋಪವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಲ್ಲಗಳೆದಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕೆಲವು ಸ್ಥಳೀಯ ಸಮಸ್ಯೆಗಳಿಂದಾಗಿ ಸೋಲಾಯಿತೇ ವಿನಾ: ಜೆಡಿಎಸ್ ಸೋಲಿಗೆ ಕಾಂಗ್ರೆಸ್ ಕಾರಣವಲ್ಲ ಎಂದರು.  ದೇವೇಗೌಡರು  ಈ ರೀತಿಯ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ. ಸಿದ್ದರಾಮಯ್ಯ ಸರಿಯಾಗಿಯೇ ಹೇಳಿದ್ದಾರೆ.  ಅವರ ಬಗ್ಗೆ ಆರೋಪ ಮಾಡಿದ್ದರಿಂದ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮಧ್ಯ ಅಧಿಕಾರ ಹಂಚಿಕೆ, ಶಾಸಕರ ಕೆಲಸಗಳ ಬಗ್ಗೆ ಸಮಸ್ಯೆಗಳು ಇತ್ತು. ಆದರೆ, ವೈಯಕ್ತಿಕ ವಿಚಾರಕ್ಕೆ ಯಾವತ್ತೂ ತೊಂದರೆ ನೀಡಿರಲಿಲ್ಲ. ಸರ್ಕಾರ ಪತನಗೊಳ್ಳುವ ಕೊನೆ ಗಳಿಗೆಯವರೆಗೂ ಎಲ್ಲಾ ರೀತಿಯ ಸಹಕಾರ ನೀಡಲಾಗಿತ್ತು. ಆದರೂ, ಕಾಂಗ್ರೆಸ್  ಮೇಲೆ ವಿನಾಕಾರಣ ಆರೋಪ ಮಾಡಲಾಗುತಿತ್ತು. ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಕಣ್ಣೀರಿಡುವ ಮೂಲಕ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರು. ಇದು ನಾಟಕೀಯವಾಗಿದ್ದರೂ ಅಸಾಮರ್ಥ್ಯತತೆಯನ್ನು ತೋರಿಸುತಿತ್ತು ಎಂದು ಟೀಕಿಸಿದರು.

ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರೆಯಬೇಕಾ ? ಅಥವಾ ಕಡಿದುಕೊಳ್ಳಬೇಕಾ ಎಂಬುದನ್ನು ನಿರ್ಧರಿಸಲು ಸಕಾಲವಲ್ಲ, ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ ಎಂದು  ಅವರು ಇದೇ ವೇಳೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com