ಉಪ ಚುನಾವಣೆ: 13 ಕ್ಷೇತ್ರವಲ್ಲ 15 ಕ್ಷೇತ್ರವನ್ನು ಬಿಜೆಪಿ ಗೆಲ್ಲಲಿ, ಡಿಕೆ ಶಿವಕುಮಾರ್ ಲೇವಡಿ

ಬಿಜೆಪಿಯವರು 13 ಕ್ಷೇತ್ರಗಳನ್ನು ಗೆಲ್ಲುತ್ತಾರೆ ಎಂದು ಯಾರು ಹೇಳಿದ್ದು? ಅವರು 15 ಕ್ಷೇತ್ರ ದಲ್ಲೂ ಗೆಲ್ಲುತ್ತಾರೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Updated on

ಬೆಂಗಳೂರು: ಬಿಜೆಪಿಯವರು 13 ಕ್ಷೇತ್ರಗಳನ್ನು ಗೆಲ್ಲುತ್ತಾರೆ ಎಂದು ಯಾರು ಹೇಳಿದ್ದು? ಅವರು 15 ಕ್ಷೇತ್ರ ದಲ್ಲೂ ಗೆಲ್ಲುತ್ತಾರೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 13 ಮಂದಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. 13 ಅಂತಾ ಹೇಳಿದ್ಯಾರು? ಇಬ್ಬರಿಗೆ ಅವರು ಮೋಸ ಮಾಡಬಾರದು ಅಲ್ವಾ? ಹೀಗಾಗಿ 15 ಕ್ಷೇತ್ರಗಳನ್ನು ಗೆಲ್ಲುತ್ತಾರೆ. ಅವರ ಹೇಳಿಕೆ ಭ್ರಮೆ. 15 ಜನರನ್ನೂ ಮಂತ್ರಿ ಮಾಡ್ತಿನಿ ಅಂತಾ ಹೇಳಿದ್ದಾರೆ ಮಾಡಲಿ ಎಂದು ಅವರು ವ್ಯಂಗ್ಯವಾಡಿದರು.

ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ಉಪಚುನಾವಣೆಗೆ ನಡೆದಿದ್ದು ಡಿಸೆಂಬರ್ 9ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com