ಸಿಎಂ ಬಿಎಸ್ ಯಡಿಯೂರಪ್ಪ ಈಸ್ ನೋ ಮೋರ್ ಎ ಲೀಡರ್: ಡಿಕೆ ಶಿವಕುಮಾರ್

ಬಿಜೆಪಿಗೆ ಹೋದ ಮೇಲೂ ಶಾಸಕರು ಸಿದ್ದರಾಮಯ್ಯ ಅವರನ್ನೇ ತಮ್ಮ ನಾಯಕರು ಎಂದು  ಹೇಳುವುದನ್ನು ಕೇಳಿದರೆ ತಮಗೆ ಬಹಳ ಖುಷಿ ಆಗುತ್ತದೆ. ಬಿಜೆಪಿಯಲ್ಲಿ 'ಯಡಿಯೂರಪ್ಪ ಈಸ್  ನೋ ಮೋರ್ ಎ ಲೀಡರ್' ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಸೂಚ್ಯವಾಗಿ  ಹೇಳಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Updated on: 

ಬೆಂಗಳೂರು: ಬಿಜೆಪಿಗೆ ಹೋದ ಮೇಲೂ ಶಾಸಕರು ಸಿದ್ದರಾಮಯ್ಯ ಅವರನ್ನೇ ತಮ್ಮ ನಾಯಕರು ಎಂದು  ಹೇಳುವುದನ್ನು ಕೇಳಿದರೆ ತಮಗೆ ಬಹಳ ಖುಷಿ ಆಗುತ್ತದೆ. ಬಿಜೆಪಿಯಲ್ಲಿ 'ಯಡಿಯೂರಪ್ಪ ಈಸ್  ನೋ ಮೋರ್ ಎ ಲೀಡರ್' ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಸೂಚ್ಯವಾಗಿ  ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಲವು ವರ್ಷಗಳಿಂದ  ಕಾಂಗ್ರೆಸ್‌ನ ನಾಯಕರಾಗಿದ್ದಾರೆ. ಅವರು  ಅದೃಷ್ಟವಂತರು, ಮುಖ್ಯಮಂತ್ರಿಯಾಗಿದ್ದವರು, ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು  ಸಾಧಿಸಿದ ಮೇಲೂ ಆ ಶಾಸಕರೆಲ್ಲ ಯಡಿಯೂರಪ್ಪ ಬದಲಿಗೆ ಸಿದ್ದರಾಮಯ್ಯ ಅವರನ್ನು  ಹೊಗಳುತ್ತಿದ್ದಾರೆನ್ನುವುದೇ ಖುಷಿಯ ವಿಚಾರ ಎಂದು ಹೇಳಿದರು.  

ಉಪ ಚುನಾವಣೆಯಲ್ಲಿ ಸೋತ ಕಾರಣಕ್ಕಾಗಿ  ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿರುವುದು  ಅತ್ಯಂತ ಸಹಜ ಬೆಳವಣಿಗೆಯೇ  ಆಗಿದೆ. ಚುನಾವಣಾ ಪ್ರಚಾರದಲ್ಲಿ ತಾವು ಸಹ ಹಲವು ಕ್ಷೇತ್ರಗಳಿಗೆ ಓಡಾಟ ನಡೆಸಿದ್ದು ಹೋದ  ಕಡೆಯಲ್ಲೆಲ್ಲ ಜನರು ಸೇರಿದ್ದು ನೋಡಿ ಬಹಳ ಖುಷಿಯಾಗುತ್ತಿತ್ತು. ಆದರೆ ಅವು ಯಾವುವೂ   ಮತಗಳಾಗಿ ಪರಿವರ್ತನೆಯಾಗಲಿಲ್ಲ. ಹೀಗಾಗಿ ತಮಗೂ ಈ ಬಗ್ಗೆ  ನೋವಾಗಿದೆ ಎಂದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com