ಖಾಲಿಯಿರುವ ಮೂರು ಹುದ್ದೆಗಳ ನೇಮಕಕ್ಕೆ ಎಐಸಿಸಿ ಕಸರತ್ತು; ಸರತಿ ಸಾಲಿನಲ್ಲಿ 'ಕೈ' ನಾಯಕರು

ವಿಧಾನ ಸಭೆ ವಿರೋಧ ಪಕ್ಷದ ನಾಯಕಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಮತ್ತು ಕೆಪಿಸಿಸಿಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜಿನಾಮೆ ನೀಡಿದ್ದು, ತೆರೆವಾಗಿರುವಸ್ಥಾನಗಳನ್ನು ತುಂಬಲು ದೆಹಲಿ ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ.
ಡಿಕೆ. ಶಿವಕುಮಾರ್
ಡಿಕೆ. ಶಿವಕುಮಾರ್
Updated on: 

ಬೆಂಗಳೂರು: ವಿಧಾನ ಸಭೆ ವಿರೋಧ ಪಕ್ಷದ ನಾಯಕಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಮತ್ತು ಕೆಪಿಸಿಸಿಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜಿನಾಮೆ ನೀಡಿದ್ದು, ತೆರೆವಾಗಿರುವಸ್ಥಾನಗಳನ್ನು ತುಂಬಲು ದೆಹಲಿ ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ.

ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ ಮಾತುಕತೆ ನಡೆಸಿದರು.  ವೇಳೆ ರಾಜೀನಾಮೆ ಹಿಂಪಡೆಯಬೇಕು ಎಂದು ಮಿಸ್ತ್ರಿ ಮಾಡಿದ ಮನವಿಯನ್ನು ನಿರಾಕರಿಸಿದ ಸಿದ್ದರಾಮಯ್ಯ ಅವರು, ಐ ಆ್ಯಮ್ ಸಾರಿ ಮಿಸ್ಟರ್ ಮಿಸ್ತ್ರಿ ಎಂದು ಹೇಳಿದರು.

ರಾಜೀನಾಮೆ ವಾಪಸ್ ಪಡೆಯುವುದು ಅಸಾಧ್ಯದ ಮಾತು. ನನ್ನ ಆರೋಗ್ಯ ಚನ್ನಾಗಿದೆ. ಆದರೆ ಯಾವುದೇ ಹುದ್ದೆಯಲ್ಲಿ ಮುಂದುವರೆಯಲ್ಲ. ಬೇರೆಯವರಿಗೂ ಅವಕಾಶ ಮಾಡಿ ಕೊಡಿ. ಪಕ್ಷದ ಒಂದಿಷ್ಟು ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗೋದು ಕಷ್ಟ. ಇಂತಹವರನ್ನು ಮುಂದಿಟ್ಟುಕೊಂಡು ಪಕ್ಷ ಕಟ್ಟೋದು ಕಷ್ಟ ಎಂದು ಹೇಳುವ ಮೂಲಕ ಹಿರಿಯ ನಾಯಕರ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.

ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಸಮುದಾದ ಡಿ.ಕೆ ಶಿವಕುಮಾರ್ ಹಾಗೂ ದಲಿತ ಮುಖಂಡ ಕೆಎಚ್  ಮುನಿಯಪ್ಪ, ಎಂಬಿ ಪಾಟೀಲ್, ಎಚ್.ಚೆ ಪಾಟೀಲ್, ಮತ್ತು ಹರಿಪ್ರಸಾದ್ ಹೆಸರುಗಳು ಸುತ್ತುತ್ತಿವೆ. 

ಆದರೆ ಕೆಲವರ ಪ್ರಕಾರ ಆಯ್ಕೆ ಪ್ರಕ್ರಿಯೆ ಕೇವಲ ಕಣ್ಣೊರೆಸುವ ತಂತ್ರವಾಗಿದೆ, ಎಐಸಿಸಿಯಂದ ಬಂದಿರುವ ವೀಕ್ಷಕರು ಎಲ್ಲಾ ನಾಯಕರುಗಳ ಅಭಿಪ್ರಾಯ ಕೇಳಿಲ್ಲ, ಕೇವಲ 51 ಮಂದಿಯನ್ನು ಮಾತ್ರ ಸಂಪರ್ಕಿಸಿದ್ದಾರೆ.  ಈಗಾಗಲೇ ಯಾರ್ಯಾರಿಗೆ ಯಾವ ಹುದ್ದೆ ನೀಡಬೇಕೆು ಎಂದು ಹೈಕಮಾಂಡ್ ನಿರ್ಧರಿಸಿರುತ್ತದೆ. ಅಂತಿಮವಾಗಿ ಕಾಲ್ ಬರುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com