ದೋಸ್ತಿ ಸರ್ಕಾರಕ್ಕೆ ಸಂಕಷ್ಟ: ಜೆಡಿಎಸ್ ಶಾಸಕರಿಗೂ ವಿಪ್ ಜಾರಿ

ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಅವರು ವಿಧಾನಸಭೆ ಕಲಾಪಕ್ಕೆ ಗೈರಾದ ಬಳಿಕ ಎಚ್ಚೆತ್ತುಕೊಂಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ...
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
Updated on: 
ಬೆಂಗಳೂರು: ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಅವರು ವಿಧಾನಸಭೆ ಕಲಾಪಕ್ಕೆ ಗೈರಾದ ಬಳಿಕ ಎಚ್ಚೆತ್ತುಕೊಂಡಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು, ತಮ್ಮ ಪಕ್ಷದ ಶಾಸಕರಿಗೂ ಗುರುವಾರ ವಿಪ್ ಜಾರಿ ಮಾಡಿದ್ದಾರೆ.
ಉಭಯ ಸದನದಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರು ನಿರಂತರ ಧರಣಿ ಮೂಲಕ ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಕಾಂಗ್ರೆಸ್ ತಮ್ಮ ಪಕ್ಷದ ಶಾಸಕರಿಗೆ ಈಗಾಗಲೇ ವಿಪ್ ಜಾರಿಗೊಳಿಸಿದೆ. ಆದರೆ ಜೆಡಿಎಸ್ ತಮ್ಮ ಪಕ್ಷದ ಶಾಸಕರ ಮೇಲೆ ನಂಬಿಕೆಯಿದೆ ಎಂದಿತ್ತು. ಈಗ ನಾರಾಯಣ ಗೌಡರು ಸದನದಕ್ಕೆ ಗೈರಾದ ಹಿನ್ನೆಲೆ ಮತ್ತಷ್ಟು ಶಾಸಕರು  ಕೈತಪ್ಪುವ ಭೀತಿಯಿಂದ ವಿಪ್ ಜಾರಿಗೊಳಿಸಿದೆ.
ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೈತ್ರಿ ಸರ್ಕಾರದ ಬಜೆಟ್ ಮಂಡಿಸಲಿದ್ದಾರೆ. ಹಾಗೂ ಹಣಕಾಸು ವಿಧೇಯಕ ಸೇರಿದಂತೆ ವಿವಿಧ ವಿಧೇಯಕಗಳನ್ನು ಅಂಗೀಕರಿಸಲು ಶಾಸಕರ ಸಂಖ್ಯಾಬಲದ ಅಗತ್ಯವಿದ್ದು, ಸದನದಲ್ಲಿ ಉಪಸ್ಥಿತರಿರುವಂತೆ ಜೆಡಿಎಸ್ ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com