ಇದೀಗ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರುವ ನಾರಾಯಣ ಗೌಡ ಅವರು, ಯಾರೂ ಕೂಡ ನನ್ನನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಆದರೆ ನಾನು ಬಯಸಿದ್ದೇ ಆದರೆ ಬಿಜೆಪಿ 10 ಶಾಸಕರನ್ನು ಹೈಜಾಕ್ ಮಾಡಿ ಜೆಡಿಎಸ್ ಪಕ್ಷಕ್ಕೆ ಸೇರಿಸುವ ಸಾಮರ್ಥ್ಯ ತಮಗಿದೆ. ಫುಡ್ ಪಾಯ್ಸನ್ ಆಗಿ ನಾನು ಆಸ್ಪತ್ರೆಗೆ ದಾಖಲಾಗಿದ್ದೆ. ನನ್ನ ಬಳಿ ಆಸ್ಪತ್ರೆಯ ಬಿಲ್ ಗಳು ಮತ್ತು ಇತರೆ ದಾಖಲೆಗಳಿದ್ದು, ಅಗತ್ಯ ಬಿದ್ದರೆ ತೋರಿಸುತ್ತೇನೆ ಎಂದು ಹೇಳಿದರು.