ಜೊತೆಯಲ್ಲೇ ಬದುಕುತ್ತೇವೆ, ಜೊತೆಯಲ್ಲೇ ಸಾಯುತ್ತೇವೆ: ಡಿಕೆಶಿ ಉವಾಚ!

ನಾವು ಜೊತೆಯಲ್ಲೇ ಬದುಕುತ್ತೇವೆ, ಜೊತೆಯಲ್ಲಿಯೇ ಸಾಯುತ್ತೇವೆ, ಏಕೆಂದರೇ 40 ವರ್ಷಗಳಿಂದ ನಾವು ಪಕ್ಷಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ...
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
Updated on: 
ಬೆಂಗಳೂರು: ನಾವು ಜೊತೆಯಲ್ಲೇ ಬದುಕುತ್ತೇವೆ, ಜೊತೆಯಲ್ಲಿಯೇ ಸಾಯುತ್ತೇವೆ, ಏಕೆಂದರೇ 40 ವರ್ಷಗಳಿಂದ ನಾವು ಪಕ್ಷಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಜಿನಾಮೆ ನೀಡಿದ್ದ ಶಾಸಕ ಎಂಟಿಬಿ ನಾಗರಾಜ್ ಅವರ ಮನೆಗೆ ತೆರಳಿ ಮನವೊಲಿಕೆ ನಂತರ ಮಾತನಾಡಿದ ಶಿವಕುಮಾರ್,  40 ವರ್ಷಗಳಿಂದ ನಾವು ಪಕ್ಷಕ್ಕಾಗಿ ಒಟ್ಟಿಗೆಕೆಲಸ ಮಾಡಿದ್ದೇವೆ ಹೀಗಾಗಿ ಹಳೇಯದನ್ನೆಲ್ಲಾ ಮರೆತು ಒಟ್ಟಾಗಿ ಮುನ್ನಡೆಯುತ್ತೇವೆ ಎಂದು ಹೇಳಿದ್ದಾರೆ.
ನಾಗರಾಜ್ ಗೆದ್ದಾಗಲೆಲ್ಲಾ ಪಕ್ಷ ಅಧಿಕಾರದಲ್ಲಿದೆ. ಒಂದು ಕುಟುಂಬ ಎಂದ ಮೇಲೆ ಹಲವು ರೀತಿಯ ಭಿನ್ನಾಭಿಪ್ರಾಯಗಳು ಇರುತ್ತವೆ, ಅವುಗಳನ್ನೆಲ್ಲಾ  ಸರಿದೂಗಿಸಿಕೊಂಡು ಹೋಗಬೇಕು, ಮುಂದೆ ನಮ್ಮ ಜೊತೆ ಇರಲು ನಾಗರಾಜ್  ಸಂತೋಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಶಿವಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com