ಬೆಂಗಳೂರಿನಲ್ಲಿ ರಾಹುಲ್ ಸಂವಾದದ ವೇಳೆ 'ಮೋದಿ ಮೋದಿ' ಘೋಷಣೆ; ಕಾಂಗ್ರೆಸ್‌ಗೆ ಇರಿಸು ಮುರಿಸು, ವಿಡಿಯೋ!

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಸಂವಾದ ಕಾರ್ಯಕ್ರಮ ವೇಳೆ ಮೋದಿ ಮೋದಿ ಎಂದು ಘೋಷಣೆ ಕೂಗಿದ ಟೆಕ್ಕಿಗಳಿಗೆ ಪೊಲೀಸರು...
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಬೆಂಗಳೂರು: ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಸಂವಾದ ಕಾರ್ಯಕ್ರಮ ವೇಳೆ ಮೋದಿ ಮೋದಿ ಎಂದು ಘೋಷಣೆ ಕೂಗಿದ ಟೆಕ್ಕಿಗಳಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. 
ಮಾನ್ಯತಾ ಟೆಕ್ ಪಾರ್ಕಿನ ಆಂಪಿ ಥಿಯೇಟರ್ ನಲ್ಲಿ ನವೋದ್ಯಮಿಗಳ ಜೊತೆ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಆಗಮಿಸುತ್ತಿದ್ದಂತೆ ಕುಳಿತಿದ್ದ ಟೆಕ್ಕಿಗಳ ಮೋದಿ ಮೋದಿ ಎಂದು ಕರೆದು ಆರಂಭದಲ್ಲೇ ಮುಖಭಂಗ ಮಾಡಿದ್ದಾರೆ.
ಭಿತ್ತಿ ಪತ್ರಗಳನ್ನು ಹಿಡಿದು ಮೋದಿ ಪರ ಘೋಷಣೆ ಕೂಗಿದ ಟೆಕ್ಕಿಗಳು ಮತ್ತೊಮ್ಮೆ ಮೋದಿ, ಹರ್ ಹರ್ ಮೋದಿ, ಸಾಫ್ ನಿಯತ್ ಸಬ್ ಕಾ ವಿಕಾಸ್ ಎಂದು ಬರೆದಿರುವ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆ ಕೂಗಿದರು. 
ಕೂಡಲೇ ಪೊಲೀಸರು ಮೋದಿ ಬೆಂಬಲಿಗರು ಹಾಗೂ ಟೆಕ್ಕಿಗಳನ್ನು ಚದುರಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಮೋದಿ ಪರ ಘೋಷಣೆ ಕೂಗಿದ ಟೆಕ್ಕಿಗಳ ಮೇಲೆ ಲಾಠಿ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com