'ಸೋಲಿಸುವವನು, ಗೆಲ್ಲಿಸುವವನು ಮೇಲಿದ್ದಾನೆ, ಕಾಲರ್ ಎತ್ತಿಕೊಂಡು ಹೋದರೆ ಮತ ಹಾಕಲ್ಲ': ಡಿಕೆಶಿಗೆ ಸುಧಾಕರ್ ಟಾಂಗ್

ಅತೃಪ್ತ ಶಾಸಕರ ಭೇಟಿ ಚುನಾವಣಾ ಕಣದಲ್ಲೇ ಎಂದು ಸವಾಲು ಹಾಕಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿರುವ ಅತೃಪ್ತ ಶಾಸಕ ಕೆ ಸುಧಾಕರ್, ಸೋಲಿಸುವವನು, ಗೆಲ್ಲಿಸುವವನು ಮೇಲಿದ್ದಾನೆ, ಕಾಲರ್ ಎತ್ತಿಕೊಂಡು ಹೋದರೆ ಮತ ಹಾಕಲ್ಲ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಅತೃಪ್ತ ಶಾಸಕರ ಭೇಟಿ ಚುನಾವಣಾ ಕಣದಲ್ಲೇ ಎಂದು ಸವಾಲು ಹಾಕಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿರುವ ಅತೃಪ್ತ ಶಾಸಕ ಕೆ ಸುಧಾಕರ್, ಸೋಲಿಸುವವನು, ಗೆಲ್ಲಿಸುವವನು ಮೇಲಿದ್ದಾನೆ, ಕಾಲರ್ ಎತ್ತಿಕೊಂಡು ಹೋದರೆ ಮತ ಹಾಕಲ್ಲ ಎಂದು ಹೇಳಿದ್ದಾರೆ.
ಅನರ್ಹ ಶಾಸಕ ಡಾ.ಕೆ.ಸುಧಾಕರ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ತಾವು ಇಲ್ಲಿರಲಿಲ್ಲ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಯಾವುದೇ ರಾಜಕೀಯ ಮಾತುಕತೆ ನಡೆದಿಲ್ಲ. ಸಿಎಂ ಯಡಿಯೂರಪ್ಪ ಪ್ರಮಾಣ ತೆಗೆದುಕೊಂಡಾಗ ನಾನು ಇರಲಿಲ್ಲ. ಹಾಗಾಗಿ ಈಗ ಬಂದು ಅಭಿನಂದನೆ ಸಲ್ಲಿಸಿದ್ದೇನೆ ಅಷ್ಟೇ. ರಾಜಕೀಯವಾಗಿ ಏನು ಚರ್ಚೆಯಾಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಮಾತುಕತೆ ನಡೆಸಿದ್ದೇನೆ. ಅವರು ಅಭಿವೃದ್ಧಿಗೆ ಅನುದಾನ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಹಾಗೂ ಅನುದಾನ ಬಿಡುಗಡೆ ಬಗ್ಗೆ ಚರ್ಚೆ ನಡೆಸಿದ್ದೇನೆ. ಅವರು ಅನುದಾನ ಬಿಡುಗಡೆ ಮಾಡಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು. 
ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ‌ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಾದರೂ ಹಿಂದಿನ ಸರ್ಕಾರದವರು ಅನುದಾನ ಬಿಡುಗಡೆ ಮಾಡಿರಲಿಲ್ಲ. ಈಗ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ಕುರಿತು ತನಗೆ ಯಾವುದೇ ಮಾಹಿತಿಯಿಲ್ಲ. ಬಿಜೆಪಿ ಸೇರ್ಪಡೆ ಕುರಿತು ಕ್ಷೇತ್ರದ ಜನರ ಜತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸುಧಾಕರ್ ಹೇಳಿದರು.
ಸೋಲಿಸುವವನು, ಗೆಲ್ಲಿಸುವವನು ಮೇಲಿದ್ದಾನೆ, ಕಾಲರ್ ಎತ್ತಿಕೊಂಡು ಹೋದರೆ ಮತ ಹಾಕಲ್ಲ
ಇದೇ ವೇಳೆ ಅತೃಪ್ತ ಶಾಸಕರ ಭೇಟಿ ಚುನಾವಣಾ ಕಣದಲ್ಲೇ ಎಂದು ಸವಾಲು ಹಾಕಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿರುವ ಅತೃಪ್ತ ಶಾಸಕ ಕೆ ಸುಧಾಕರ್, 'ಕಾಲರ್ ಎತ್ತಿಕೊಂಡು ಜನರ ಬಳಿ ಹೋದರೆ ಮತ ಕೊಡುವುದಿಲ್ಲ. ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದವರನ್ನು ಮತದಾರರು ಆಯ್ಕೆ ಮಾಡುತ್ತಾರೆ. ಯಾರೋ ಇಲ್ಲಿ ಒಬ್ಬರು ಬೊಬ್ಬೆ ಹೊಡೆದ ತಕ್ಷಣ ಜನರು ಹೆದರುವುದಿಲ್ಲ. ಆ ರೀತಿ ಬೆದರುವುದಾಗಿದ್ದರೆ ಲೋಕಸಭೇ ಚುನಾವಣೆಯಲ್ಲಿ ಏಕೆ ಕಾಂಗ್ರೆಸ್ ಒಂದು ಸ್ಥಾನವನ್ನು ಮಾತ್ರ ಗೆಲ್ಲುತ್ತಿತ್ತು? ಟಾಂಗ್ ನೀಡಿದ್ದಾರೆ.
ಅಂತೆಯೇ ಮೈತ್ರಿ ನಾಯಕರ ವಿರುದ್ಧ ಹರಿಹಾಯ್ದಿರುವ ಸುಧಾಕರ್​, 'ಇವರೆಲ್ಲರೂ ಸೇರಿ ಇಡೀ ರಾಜ್ಯ ಸುತ್ತಿದ್ದಾರೆ. ಹಾಗಿದ್ದರೂ ಈ ಅತಿರಥ- ಮಹಾರಥರು ಸೋತಿದ್ದೇಕೆ..? ಎಂದು ಪ್ರಶ್ನಿಸಿದ್ದಾರೆ. ಅಂತೆಯೇ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ವಿರುದ್ಧ ವಾಗ್ದಾಳಿ ನಡೆಸಿದ ಅವರು​, 'ರಮೇಶ್ ಕುಮಾರ್ ಮೌಲ್ಯಗಳಿಗೆ ಪ್ರತಿಪಾದಕರಂತೆ ನಟಿಸುತ್ತಾರೆ. ಅವರ ಆದೇಶ ಅನೈತಿಕವಾಗಿದೆ. ಅದನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ. ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com