ಅತೃಪ್ತ ಶಾಸಕರ ರಾಜಿನಾಮೆ ಇಂದೇ ನಿರ್ಧರಿಸಿ: ಸ್ಪೀಕರ್ ಗೆ 'ಸುಪ್ರೀಂ' ಆದೇಶ; ವಿಚಾರಣೆ ನಾಳೆಗೆ ಮುಂದೂಡಿಕೆ

ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತ ಶಾಸಕರ ರಾಜಿನಾಮೆ ವಿಷಯವನ್ನು ಇಂದೇ ನಿರ್ಧರಿಸಬೇಕೆಂದು ಸ್ಪೀಕರ್ ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
ನವದೆಹಲಿ: ಕಾಂಗ್ರೆಸ್ ಮತ್ತು ಜೆಡಿಎಸ್  ಅತೃಪ್ತ ಶಾಸಕರ ರಾಜಿನಾಮೆ ವಿಷಯವನ್ನು ಇಂದೇ ನಿರ್ಧರಿಸಬೇಕೆಂದು ಸ್ಪೀಕರ್ ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಅತೃಪ್ತ ಶಾಸಕರ ರಾಜಿನಾಮೆಗಳನ್ನು ಅಂಗೀಕರಿಸದೇ ಸ್ಪೀಕರ್ ಮುಂದೂಡುತ್ತಿದ್ದಾರೆಂದು ಆರೋಪಿಸಿ 10 ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು, ಅತೃಪ್ತ ಶಾಸಕರ ಪರವಾಗಿ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು.
ವಾದ ಆಲಿಸಿದ ಸುಪ್ರೀಂಕೋರ್ಟ್ ಸ್ಪೀಕರ್ ಇಂದು ನಿರ್ಧಾರ ತೆಗೆದುಕೊಂಡು ನಾಳೆ ಕೋರ್ಟ್ ಗೆ ವಿಷಯ ತಿಳಿಸಬೇಕು, ಅತೃಪ್ತ ಶಾಸಕರು ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಖುದ್ದು ಹಾಜರಾಗಬೇಕು, ಹಾಗೂ ರಾಜಿನಾಮೆ ನೀಡಿದ ಶಾಸಕರಿಗೆ ಭದ್ರತೆ ಒದಗಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com