ಸಂಪುಟದಲ್ಲಿ 11 ಶಾಸಕರಿಗೂ ಸ್ಥಾನ, ಅಮಿತ್ ಶಾ ಜೊತೆಗೆ ಚರ್ಚಿಸಿ ನಿರ್ಧಾರ-ಯಡಿಯೂರಪ್ಪ

ಸಚಿವ ಸ್ಥಾನ ಆಕಾಂಕ್ಷಿಗಳ ತೀವ್ರ ಒತ್ತಡ ಹೆಚ್ಚಾಗಿರುವಂತೆ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ,  ಉಪ ಚುನಾವಣೆಯಲ್ಲಿ ಗೆದ್ದಿರುವ ಶಾಸಕರು ತಲೆ ಕೆಡಿಸುವ ಅಗತ್ಯವಿಲ್ಲ,  ಎಲ್ಲಾ 11 ಶಾಸಕರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು  ಭರವಸೆ ವ್ಯಕ್ತಪಡಿಸಿದ್ದಾರೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು:  ಸಚಿವ ಸ್ಥಾನ ಆಕಾಂಕ್ಷಿಗಳ ತೀವ್ರ ಒತ್ತಡ ಹೆಚ್ಚಾಗಿರುವಂತೆ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ,  ಉಪ ಚುನಾವಣೆಯಲ್ಲಿ ಗೆದ್ದಿರುವ ಶಾಸಕರು ತಲೆ ಕೆಡಿಸುವ ಅಗತ್ಯವಿಲ್ಲ, ಎಲ್ಲಾ 11 ಶಾಸಕರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು  ಭರವಸೆ ವ್ಯಕ್ತಪಡಿಸಿದ್ದಾರೆ

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಎಲ್ಲ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ನೀಡಲಾಗುವುದು ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಂಪುಟ ವಿಸ್ತರಣೆ ಸಂಬಂಧ ಕೇಂದ್ರದ ವರಿಷ್ಠರೊಂದಿಗೆ ಚರ್ಚಿಸಲು ಮೂರು ಬಾರಿ ಸಮಯವನ್ನು ನಿಗದಿಪಡಿಸಲಾಗಿತ್ತು. ಆದರೆ, ಅದು ಕೊನೆ ಗಳಿಯಲ್ಲಿ ರದ್ದುಪಡಿಸಲಾಗಿದ್ದು, ಅಮಿತ್ ಶಾ ಭೇಟಿ ಸಾಧ್ಯವಾಗುತ್ತಿಲ್ಲ.ಅಮಿತ್ ಶಾ ಒಪ್ಪಿಗೆ ನೀಡಿದರೆ ಯಾವಾಗ ಬೇಕಾದರೂ ದೆಹಲಿಗೆ ತೆರಳಲು ಸಿದ್ಧವಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.

ಅಮಿತ್ ಶಾ ಸಮಯ ನೀಡಿದರೆ ಯಾವಾಗಬೇಕಾದರೂ ದೆಹಲಿಗೆ ಹೋಗಿ ಸಂಪುಟ ವಿಸ್ತರಣೆ ಅಂತಿಮಗೊಳಿಸುತ್ತೇನೆ. ವಿದೇಶಕ್ಕೆ ಹೋಗುವ ಮುನ್ನ ಸಂಪುಟ ವಿಸ್ತರಣೆಯಾಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.ವಿಶ್ವ ಆರ್ಥಿಕ ಒಕ್ಕೂಟದಲ್ಲಿ ಪಾಲ್ಗೊಳ್ಳಲು  ಜನವರಿ 20 ರಂದು ಯಡಿಯೂರಪ್ಪ ದಾವೋಸ್ ಗೆ  ಭೇಟಿ ನೀಡಲಿದ್ದಾರೆ. 

ಅಮಿತ್ ಶಾ ಇದೇ 17 ಮತ್ತು 18 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಆ ಸಂದರ್ಭ ಒಪ್ಪಿಗೆ ಪಡೆದು ಸಂಪುಟ ವಿಸ್ತರಿಸುವುದಾಗಿ ಯಡಿಯೂರಪ್ಪ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com