ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕಾತಿಗೆ ಬಣ ರಾಜಕೀಯ ಅಡ್ಡಿ: ಬೆಂಬಲಿಗರಿಗೆ ಸ್ಥಾನ ಕೊಡಿಸಲು ಸಚಿವರು, ಶಾಸಕರ ಲಾಭಿ

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಜಿಲ್ಲಾಧ್ಯಕ್ಷರ ನೇಮಕ ಬಂಡಾಯದ ಬಿಸಿ ತಟ್ಟಿದ್ದು, 18 ಜಿಲ್ಲಾಧ್ಯಕ್ಷರ ನೇಮಕದಲ್ಲಿ ಭಿನ್ನಾಭಿಪ್ರಾಯ ಬುಗಿ ಲೆದ್ದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಿಗೆ ಜಿಲ್ಲಾಧ್ಯಕ್ಷರ ನೇಮಕ ಬಂಡಾಯದ ಬಿಸಿ ತಟ್ಟಿದ್ದು, 18 ಜಿಲ್ಲಾಧ್ಯಕ್ಷರ ನೇಮಕದಲ್ಲಿ ಭಿನ್ನಾಭಿಪ್ರಾಯ ಬುಗಿ ಲೆದ್ದಿದೆ.

ಇದೇ ಕಾರಣಕ್ಕೆ ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದ್ದು, ಬಣ ರಾಜಕಾರಣ ಮತ್ತಷ್ಟು ಭುಗಿಲೇಳುವ ಆತಂಕ ಶುರುವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್‌ಗೆ ಇದೀಗ ಹೊಸ ತಲೆನೋವು ಎದುರಾಗಿದೆ. ಒಂದೆಡೆ ಸರ್ಕಾರ ಹಾಗೂ ಪಕ್ಷದ ನಡುವೆ ಸಮನ್ವಯನ ಕೊರತೆ ಎದುರಾದರೆ,ಜಿಲ್ಲಾ ಮಟ್ಟ ದಲ್ಲಿ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ. ಹೀಗಾಗಿ ಕೆಲ ಜಿಲ್ಲಾಧ್ಯಕ್ಷರನ್ನೂ ಆಯ್ಕೆ ಮಾಡಿದ್ದರೂ ನೇಮಕಾತಿ ಆದೇಶ ಇದುವರೆಗೂ ಹೊರಬಿದ್ದಿಲ್ಲ.ಈಗಾಗಲೇ 18 ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ. ಉಳಿದ 18 ಜಿಲ್ಲೆಗಳಲ್ಲಿ ಬಿಜೆಪಿ ಮುಖಂಡರ ನಡುವೆ ಒಮ್ಮತ ಮೂಡಿಲ್ಲ. ಪ್ರಭಾವಿ ಜಿಲ್ಲಾ ಮುಖಂಡರು,ಮಂತ್ರಿಗಳು,ತಮ್ಮ ಬಣದವರಿಗೇ ಮಂತ್ರಿ ಸ್ಥಾನ ಕೊಡಿಸಲು ಲಾಭಿ ನಡೆಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಸಾಂಸ್ಥಿಕ ಚುನಾವಣೆಗಳ ಸಹ ಉಸ್ತುವಾರಿಗಳಾದ ಸಿ.ಟಿ.ರವಿ, ಉಪಾಧ್ಯಕ್ಷರಾದ ಭಾನು ಪ್ರಕಾಶ್, ನಿರ್ಮಲ್ ಕುಮಾರ್ ಸುರಾನಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ರಾಜ್ಯ ಸಾಂಸ್ಥಿಕ ಚುನಾವಣೆಗಳ ಉಪಚುನಾವಣಾಧಿಕಾರಿ ಹಾಲಪ್ಪ ಆಚರ್ ಸೇರಿದಂತೆ ಹಲವು ಮುಖಂಡರು ಸರ್ವಾನುಮತದಿಂದ ನೂತನ ಜಿಲ್ಲಾಧ್ಯಕ್ಷರುಗಳನ್ನು ಆಯ್ಕೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com