ಕೋವಿಡ್-19 ಹೆಸರಿನಲ್ಲಿಯೂ ಸರ್ಕಾರದಿಂದ ಲೂಟಿ: ಎಚ್.ಡಿ. ಕುಮಾರಸ್ವಾಮಿ

ಕೋವಿಡ್-19 ಹೆಸರಿನಲ್ಲಿಯೂ ಸರ್ಕಾರಗಳು ಲೂಟಿ ಹೊಡೆಯುತ್ತಿದ್ದು, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಇಂತಹ ಲೂಟಿ ಕೆಲಸವನ್ನು ಮಾತ್ರ ಬಿಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ

Published: 16th May 2020 01:28 PM  |   Last Updated: 16th May 2020 01:56 PM   |  A+A-


HDKumaraswamy1

ಎಚ್. ಡಿ. ಕುಮಾರಸ್ವಾಮಿ

Posted By : Nagaraja AB
Source : UNI

ಬೆಂಗಳೂರು: ಕೋವಿಡ್-19 ಹೆಸರಿನಲ್ಲಿಯೂ ಸರ್ಕಾರಗಳುಲೂಟಿ ಹೊಡೆಯುತ್ತಿದ್ದು, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಇಂತಹ ಲೂಟಿ ಕೆಲಸವನ್ನು ಮಾತ್ರ ಬಿಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಕಾಮಾಕ್ಷಿಪಾಳ್ಯದಲ್ಲಿ ಜೆಡಿಎಸ್ ಮುಖಂಡರಿಂದ ಜನರಿಗೆ ಉಚಿತ ಆಹಾರ ದಿನಸಿ ಸಾಮಾಗ್ರಿ ವಿತರಣೆಗೆ ಕುಮಾರಸ್ವಾಮಿ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು‌.

ಪ್ರಕೃತಿಯ ವಿಕೋಪದಲ್ಲಿಯೂ ಪರಿಹಾರ ನೀಡುವುದನ್ನು ಬಿಟ್ಟು ಸರ್ಕಾರ ಸಾಲ ಪಡೆಯಿರಿ ಎಂದು ಪ್ಯಾಕೇಜ್ ಘೋಷಿಸಿರುವುದು ಬಡವರ ಬದುಕಿನ ಜೊತೆಗೆ ಚೆಲ್ಲಾಟವಾಗಿದೆ. ಮಾಧ್ಯಮಗಳಿಗೆ ತೋರಿಸಲು ಸರ್ಕಾರ ನಡೆಸಬಾರದು. ಯಾವುದೇ ಸರ್ಕಾರ ಕೇವಲ ಖಜಾನೆ ತುಂಬಿಸುವ ಕೆಲಸ ಮಾಡದೇ ಜನರಿಗೆ  ಹತ್ತಿರವಾಗುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.

Stay up to date on all the latest ರಾಜಕೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp