ಬೆಂಗಳೂರು ಉಗ್ರರ ತಾಣ ಎಂದ ತೇಜಸ್ವಿ ಸೂರ್ಯ ವಿರುದ್ಧ ಸೌಮ್ಯ ರೆಡ್ಡಿ ಕಿಡಿ
ಬೆಂಗಳೂರು ಉಗ್ರ ಚಟುವಟಿಕೆಗಳ ಕೇಂದ್ರಸ್ಥಾನವಾಗುತ್ತಿದೆ ಎಂದು ಹೇಳಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.
Published: 28th September 2020 10:49 AM | Last Updated: 28th September 2020 10:49 AM | A+A A-

ಸೌಮ್ಯ ರೆಡ್ಡಿ ಮತ್ತು ತೇಜಸ್ವಿ ಸೂರ್ಯ
ಬೆಂಗಳೂರು: ಬೆಂಗಳೂರು ಉಗ್ರ ಚಟುವಟಿಕೆಗಳ ಕೇಂದ್ರಸ್ಥಾನವಾಗುತ್ತಿದೆ ಎಂದು ಹೇಳಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.
ನಮ್ಮ ನಗರ ಅವರಿಗೆ ಎಲ್ಲವನ್ನೂ ನೀಡಿದೆ, ಅವರ ತಮ್ಮ ಅಜೆಂಡಾಕ್ಕಾಗಿ ನಮ್ಮ ನಗರದ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. 1.2 ಕೋಟಿ ಜನರನ್ನು ತಪ್ಪಿತಸ್ಥರನ್ನಾಗಿ ಚಿತ್ರಿಸಿದ್ದಾರೆ. ಇಂತಹ ಅವಿವೇಕ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕಿ ಸೌಮ್ಯ ರೆಡ್ಡಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
Namma Bengaluru a #terrorHub? Wth. I take offence to that. My city is beautiful, cosmopolitan, diverse, IT/BT Hub, safe, peaceful/silicon city.
— Sowmya Reddy | ಸೌಮ್ಯ ರೆಡ್ಡಿ (@Sowmyareddyr) September 27, 2020
I WILL NOT let a one guy tarnish the imagine of our city. Never. NO WAY. #proudofmycity
ನನ್ನ ನಗರ ಸುಂದರ, ಕಾಸ್ಮೋಪಾಲಿಟನ್, ವೈವಿಧ್ಯತೆ, ಐಟಿ/ಬಿಟಿ ಹಬ್ ಆಗಿದೆ. ಸುರಕ್ಷತೆ, ಶಾಂತಿಯುತ ಹಾಗೂ ಸಿಲಿಕಾನ್ ಸಿಟಿಯಾಗಿದೆ. ನನ್ನ ಈ ನಗರಕ್ಕೆ ಕಳಂಕ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಶಾಸಕಿ ಹೇಳಿದ್ದಾರೆ.