ಮೋದಿ ಹೊಡೆತಕ್ಕೆ 'ಹುಡುಗ' ರಾಹುಲ್ ರಾಜಕೀಯದಲ್ಲಿ ಇರಲ್ಲ: ಆನಂದ್ ಸಿಂಗ್

ಪ್ರಧಾನಿ ನರೇಂದ್ರ ಮೋದಿ ಅವರ ಹೊಡೆತಕ್ಕೆ ಕಾಂಗ್ರೆಸ್ ನ  'ಹುಡುಗ' ರಾಹುಲ್ ಗಾಂಧಿ ಅವರು ಬಹಳ ದಿನ ರಾಜಕೀಯದಲ್ಲಿ ಉಳಿಯುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ  ಆನಂದ್ ಸಿಂಗ್  ವ್ಯಂಗ್ಯವಾಡಿದ್ದಾರೆ.
ಪ್ರಚಾರ ಸಭೆಯಲ್ಲಿ ಸಚಿವ ಆನಂದ್ ಸಿಂಗ್ ಮತ್ತಿತರರ ಚಿತ್ರ
ಪ್ರಚಾರ ಸಭೆಯಲ್ಲಿ ಸಚಿವ ಆನಂದ್ ಸಿಂಗ್ ಮತ್ತಿತರರ ಚಿತ್ರ
Updated on: 

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಹೊಡೆತಕ್ಕೆ ಕಾಂಗ್ರೆಸ್ ನ  'ಹುಡುಗ' ರಾಹುಲ್ ಗಾಂಧಿ ಅವರು ಬಹಳ ದಿನ ರಾಜಕೀಯದಲ್ಲಿ ಉಳಿಯುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ  ಆನಂದ್ ಸಿಂಗ್  ವ್ಯಂಗ್ಯವಾಡಿದ್ದಾರೆ.

ಜಗಳೂರು ತಾಲೂಕಿನ ಕಂಬತ್ತಹಳ್ಳಿ ಮರುಳುಸಿದ್ದಪ್ಪ ಭವನದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಗೆ  ಸರಿ ಸಮಾನವಾಗಿ ನಿಲ್ಲಲ್ಲು ರಾಹುಲ್ ಗಾಂಧಿ  ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಮೋದಿ ಅವರ ಸಮಕ್ಕೆ ನಿಲ್ಲಲ್ಲು ಆಗದ ರಾಹುಲ್ ಗಾಂಧಿ, ಮೋದಿ ಅವರ ಹೊಡೆತಕ್ಕೆ ಇಟಲಿ ಕಡೆ ಹೋಗಿ ಬಿಡುತ್ತಾರೆ ಎಂದರು. 

ಮೋದಿ ಅವರು ಆಕಾಶ ಆದರೆ ರಾಹುಲ್ ಗಾಂಧಿ ಭೂಮಿ ಇದ್ದಂತೆ. ಕುಸ್ತಿಗೆ ಹೋದಾಗ ಪೈಲ್ವಾನ್ ಗಳಿಬ್ಬರು ಸರಿ ಸಮಾನವಾಗಿ ಇದ್ದರೆ ಆ ಕುಸ್ತಿ ನೋಡಬಹುದು. ಆದರೆ ಬಡಕಲು ವ್ಯಕ್ತಿ ಇದ್ದರೆ ಅಂತಹ ಕುಸ್ತಿ ನೋಡಲು ಸಾಧ್ಯವೇ? ರಾಹುಲ್ ಗಾಂಧಿ ಅವರದ್ದು ಇದೀಗ ಬಡಕಲು ವ್ಯಕ್ತಿಯ ಪರಿಸ್ಥಿತಿಯಾಗಿದೆ ಎಂದು ಕುಟುಕಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com