ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಉಪ ಚುನಾವಣೆ ಗೆಲುವಿಗೆ ಹೋರಾಟ: ಡಿಕೆ ಶಿವಕುಮಾರ್

ಸಿಂಧಗಿ  ಮತ್ತು ಹಾನಗಲ್  ಎರಡೂ  ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಕಾಂಗ್ರೆಸ್  ಪ್ರತಿಷ್ಠೆ ಯನ್ನಾಗಿ ತೆಗೆದುಕೊಂಡಿದ್ದು, ಗೆಲುವಿಗಾಗಿ ತೀವ್ರ ಹೋರಾಟ  ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ . ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರು: ಸಿಂಧಗಿ  ಮತ್ತು ಹಾನಗಲ್  ಎರಡೂ  ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಕಾಂಗ್ರೆಸ್  ಪ್ರತಿಷ್ಠೆ ಯನ್ನಾಗಿ ತೆಗೆದುಕೊಂಡಿದ್ದು, ಗೆಲುವಿಗಾಗಿ ತೀವ್ರ ಹೋರಾಟ  ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ . ಶಿವಕುಮಾರ್ ಹೇಳಿದ್ದಾರೆ. 

ಪಕ್ಷದ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ  ಕ್ಷೇತ್ರಗಳಲ್ಲಿ ನಮಗೆ ಅಭ್ಯರ್ಥಿಗಳ  ಬದಲಿಗೆ ಪಕ್ಷದ ಗೆಲುವು ಬಹಳ ಮುಖ್ಯ ಎಂದು ಪರೋಕ್ಷವಾಗಿ ಜೆಡಿಎಸ್  ಟಾಂಗ್ ನೀಡಿದರು. ಕ್ಷೇತ್ರಗಳಲ್ಲಿ ನಮಗೆ ಅಭ್ಯರ್ಥಿ ಮುಖ್ಯವಲ್ಲ, ಗೆಲುವು ಮುಖ್ಯ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಪಕ್ಷದ ನಾಯಕರು ಚುನಾವಣಾ ತಯಾರಿ ಮಾಡಿಕೊಂಡಿದ್ದಾರೆ  ಎಂದರು.

ಇದೇ 4ರಂದು ಸಿಂದಗಿಗೆ ಹಾಗೂ 7ರಂದು ಹಾನಗಲ್ ಕ್ಷೇತ್ರಕ್ಕೆ ತೆರಳಿ  ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇವೆ ಎಂದು ಅವರು ತಿಳಿಸಿದರು. ದಲಿತರು ಮುಖ್ಯಮಂತ್ರಿ ಆಗಬಹುದು' ಎಂಬ ಡಾ ಜಿ . ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ  ಶಿವಕುಮಾರ್  ಎಲ್ಲರೂ ಆಸೆ ಪಡಬಹುದು. ಆದರೆ ಪಕ್ಷ ಎಲ್ಲವನ್ನು  ತೀರ್ಮಾನ ಮಾಡಲಿದೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com