

ಬೆಂಗಳೂರು: ಬಿಜೆಪಿ ವಿರುದ್ಧ ಸದಾ ಹರಿಹಾಯುತ್ತಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಈಗ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೋದಿ ಜೀ ತಮ್ಮ ಪಿ ಆರ್ ಏಜೆನ್ಸಿ ಹೇಳಿದ ಟಾಸ್ಕ್‌ನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ, ಮಳೆಯಿಲ್ಲ, ಬಿಸಿಲಿಲ್ಲ, ಕೇವಲ 20 ಮೆಟ್ಟಿಲು ಇಳಿಯಲು ಕೂಡ ಛತ್ರಿ ಬಿಚ್ಚಿತ್ತಾರೆ! ನಮ್ಮ ಪ್ರಧಾನಿಗೆ ವಿದೇಶಿಯರೆದುರು ನಗೆಪಾಟಲಿಗೆ ಈಡಾಗುವುದು ಅಭ್ಯಾಸವಾಗಿಬಿಟ್ಟಿದೆ ವ್ಯಂಗ್ಯವಾಡಿದೆ.
ಫೋಟೋ ಶೂಟ್ ಚೆನ್ನಾಗಿದೆ ನರೇಂದ್ರ ಮೋದಿ ಅವರೇ, ಆದರೆ ಲೈಟಿಂಗ್ ಕಳಪೆಯಾಗಿದೆ, ಟಾರ್ಚ್ ಬೆಳಕು ಬಳಸುವ ಬದಲು ನಿಮ್ಮ ಹೊಚ್ಚ ಹೊಸ 8,500 ಕೋಟಿ ಬೆಲೆಯ ವಿಮಾನದಲ್ಲಿ ಫೋಟೋಶೂಟ್‌ಗಾಗಿಯೇ ಪ್ರತ್ಯೇಕ ಲೈಟಿಂಗ್ ವ್ಯವಸ್ಥೆ ಮಾಡಿಸಿಕೊಳ್ಳಿ! ಅಂದಹಾಗೆ ಮಾರಲು ದೇಶದ ಇನ್ಯಾವ ಆಸ್ತಿಯ ಪಟ್ಟಿ ನೋಡುತ್ತಿದ್ದೀರಿ !? ಎಂದು ಲೇವಡಿ ಮಾಡಿದೆ.