ವಲ್ಲಭಭಾಯ್ ಪಟೇಲ್ ಭಾವ ಚಿತ್ರ ವಿವಾದ: ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಬಯಲಾಗಿದೆ ಎಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್!

ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ವಂಶಸ್ಥರ ಆರಾಧಿಸುದೆಯೇ ಹೊರತು ಇತರೆ ನಾಯಕರ ಗೌರವಿಸುವುದ ಆ ಪಕ್ಷಕ್ಕೆ ತಿಳಿದಿಲ್ಲ. ಹಾಗೇನಾದರೂ ಆದರೆ ಅದು ಕೇವಲ ಬೂಟಾಟಿಕೆ ಮಾತ್ರ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ (ಸಂಗ್ರಹ ಚಿತ್ರ)
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ (ಸಂಗ್ರಹ ಚಿತ್ರ)

ಬೆಂಗಳೂರು: ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ವಂಶಸ್ಥರ ಆರಾಧಿಸುದೆಯೇ ಹೊರತು ಇತರೆ ನಾಯಕರ ಗೌರವಿಸುವುದ ಆ ಪಕ್ಷಕ್ಕೆ ತಿಳಿದಿಲ್ಲ. ಹಾಗೇನಾದರೂ ಆದರೆ ಅದು ಕೇವಲ ಬೂಟಾಟಿಕೆ ಮಾತ್ರ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಕಾಂಗ್ರೆಸ್ ಕರ್ನಾಟಕ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸೋರಿಕೆಯಾದ ವೈರಲ್ ವೀಡಿಯೊ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, 'ನಮ್ಮ ದೇಶದ ಸ್ಥಾಪಕ ಪಿತಾಮಹರಿಗೆ ಗೌರವ ನೀಡುವುದಕ್ಕಿಂತ ಕಾಂಗ್ರೆಸ್ ಗೆ ವಂಶಗಳನ್ನು ಆರಾಧಿಸುವುದೇ ಹೆಚ್ಚು ಮುಖ್ಯವಾಗಿದೆ. ಇತರೆ ನಾಯಕರ ಮೇಲಿನ ಪ್ರೀತಿ ಕೇವಲ ಬೂಟಾಟಿಕೆಯನ್ನು ಈ ವಿಡಿಯೋ ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.

"ಕೆಲವು ವಾರಗಳ ಹಿಂದೆ ಡಿಕೆ ಶಿವಕುಮಾರ್ ಅವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದ  ಇಬ್ಬರು ನಾಯಕರೂ ಕೂಡ ಇದೇ ರೀತಿ ಸಿಕ್ಕಿಬಿದ್ದಿದ್ದರು. ಇಂದು ಶಿವಕುಮಾರ್ ಮತ್ತು ಸಿದ್ಧರಾಮಯ್ಯ ಅವರು ಪಟೇಲ್ ಬಗ್ಗೆ ಎಷ್ಟು ಗೌರವ ಹೊಂದಿದ್ದಾರೆ ಎಂದು ಮಾತನಾಡಿದ್ದಾರೆ. ಇದು ಕಾಂಗ್ರೆಸ್ಸಿನ ಬೂಟಾಟಿಕೆಯನ್ನು ಪದೇ ಪದೇ ಬಹಿರಂಗಪಡಿಸುತ್ತದೆ. ಅಲ್ಲಿ ಸ್ಥಾಪಕ ಪಿತಾಮಹರಿಗೆ ಗೌರವ ನೀಡುವುದಕ್ಕಿಂತ ನಿರ್ದಿಷ್ಟ ವಂಶಗಳನ್ನು ಆರಾಧಿಸುವುದು ಮುಖ್ಯವಾಗಿದೆ. ಸ್ವಾತಂತ್ರ್ಯಾ ನಂತರದ ಭಾರತದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಸರ್ದಾರ್ ಪಟೇಲ್ ಸೇರಿದಂತೆ ಹಲವು ನಾಯಕರು ನಮ್ಮ ದೇಶದವರು" ಎಂದು ಚಂದ್ರಶೇಖರ್ ಹೇಳಿದರು.

ಸ್ಟ್ಯಾಚ್ಯೂ ಆಫ್ ಯೂನಿಟಿ ಬಗ್ಗೆ ಕಾಂಗ್ರೆಸ್ ಟೀಕೆಗಳನ್ನು ಸ್ಮರಿಸಿದ ಅವರು, "ಏಕತೆಯ ಪ್ರತಿಮೆ" ಅನಾವರಣಗೊಳಿಸಿ ದೇಶಕ್ಕೆ ಅರ್ಪಿಸಿದಾಗ ಅವರು ಸರ್ದಾರ್ ಪಟೇಲ್ ಅವರನ್ನು ಟೀಕಿಸಿದ್ದರು. ಕಾಂಗ್ರೆಸ್ ಎಂದಿಗೂ ಪಟೇಲ್ ಅವರನ್ನು ಗುರುತಿಸಲಿಲ್ಲ ಅಥವಾ ಅವರ ಕುಟುಂಬದ ಸದಸ್ಯರಿಗೆ ಭಾರತ ರತ್ನ ನೀಡಲಿಲ್ಲ. ಇತರರಿಗೆ ಭಾರತ ರತ್ನ ನೀಡಲಾಯಿತು. ಕಾಂಗ್ರೆಸ್ ಪಕ್ಷವು ಯಾವ ರೀತಿಯ ಸ್ಥಾಪನೆಯಾಗಿದೆ ಮತ್ತು ಪಕ್ಷದಲ್ಲಿ ಯಾವ ರೀತಿಯ ಜನರು ಮತ್ತು ನಾಯಕರು ಇದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಘಟನೆಗಳು ಭಾರತದ ಜನರಿಗೆ ಬಹಳ ಮುಖ್ಯವಾದ ವೇದಿಕೆಯನ್ನು ಪೂರೈಸುತ್ತದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯತಿಥಿಯ ಅಂಗವಾಗಿ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರ ಜನ್ಮದಿನವಾದ ಅಕ್ಟೋಬರ್ 31 ರಂದು ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರವನ್ನು ಸ್ಥಾಪಿಸಲು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮನವೊಲಿಸಿದರು. ಭಾರತೀಯ ಜನತಾ ಪಕ್ಷವು ಟೀಕಿಸಬಹುದು ಮತ್ತು ಸರ್ದಾರ್ ಪಟೇಲ್ ಅವರ ಭಾವಚಿತ್ರವನ್ನು ಹಾಕದಿದ್ದರೆ ಬೇರೆ ಅರ್ಥ ಬರುತ್ತದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಿದ್ದರಾಮಯ್ಯಗೆ ಪ್ರತ್ಯುತ್ತರ ನೀಡಿದ ಶಿವಕುಮಾರ್, ‘ನಾವು ಯಾವತ್ತೂ ಪಟೇಲರ ಭಾವಚಿತ್ರ ಇಟ್ಟುಕೊಂಡಿಲ್ಲ’ ಎಂದು ಹೇಳಿದ್ದಾರೆ. ಆದಾಗ್ಯೂ, ಅವರು ನಂತರ ಕಾಂಗ್ರೆಸ್ ಕಚೇರಿಯಲ್ಲಿ ನೌಕರನಿಗೆ ಸರ್ದಾರ್ ಪಟೇಲ್ ಅವರ ಭಾವಚಿತ್ರವನ್ನು ತರುವಂತೆ ಸೂಚಿಸಿದರು. ಈ ಬೆಳವಣಿಗೆ ಬೆನ್ನಲ್ಲೇ ಇಂದಿರಾ ಗಾಂಧಿ ಭಾವಚಿತ್ರದ ಜೊತೆಗೆ ಪಟೇಲ್ ಅವರ ಚಿತ್ರವನ್ನು ಸ್ಥಾಪಿಸುವಂತೆ ಶಿವಕುಮಾರ್ ಅವರನ್ನು ಕೇಳುತ್ತಿರುವ ವೀಡಿಯೊ ವೈರಲ್ ಆಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com