ರಾಯಚೂರನ್ನು ತೆಲಂಗಾಣ ರಾಜ್ಯದೊಂದಿಗೆ ವಿಲೀನಗೊಳಿಸಿ: ರಾಜ್ಯ ಸರ್ಕಾರಕ್ಕೆ ಬಿಜೆಪಿ ಶಾಸಕ ಆಗ್ರಹ

ಉತ್ತಮ ಅಭಿವೃದ್ಧಿಗಾಗಿ ಕರ್ನಾಟಕ ರಾಯಚೂರನ್ನು ತೆಲಂಗಾಣ ರಾಜ್ಯದೊಂದಿಗೆ ವಿಲೀನಗೊಳಿಸುವಂತೆ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರು ಸೋಮವಾರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೈದರಾಬಾದ್: ಉತ್ತಮ ಅಭಿವೃದ್ಧಿಗಾಗಿ ಕರ್ನಾಟಕ ರಾಯಚೂರನ್ನು ತೆಲಂಗಾಣ ರಾಜ್ಯದೊಂದಿಗೆ ವಿಲೀನಗೊಳಿಸುವಂತೆ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರು ಸೋಮವಾರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಶಿವರಾಜ್ ಪಾಟೀಲ್ ಅವರು ನೀಡಿರುವ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ಟೀಕೆಗಳೂ ಕೂಡ ವ್ಯಕ್ತವಾಗತೊಡಗಿವೆ. 

ರಾಯಚೂರಿನಲ್ಲಿ ನಡೆದ ಸಭೆಯೊಂದರಲ್ಲಿ ಸಚಿವ ಪ್ರಭು ಚೌಹಾಣ್ ಕೂಡ ಭಾಗಿಯಾಗಿದ್ದು, ಸಭೆಯಲ್ಲಿ ಶಿವರಾಜ್ ಪಾಟೀಲ್ ಅವರು ಈ ಕುರಿತು  ಮಾತನಾಡಿದ್ದಾರೆ.  ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ, ಬೆಳಗಾವಿ ಮತ್ತು ಧಾರವಾಡವನ್ನು ರಾಜ್ಯ ಸರ್ಕಾರ ಅಭಿವೃದ್ಧಿಪಡಿಸುತ್ತಿರುವಾಗ, ರಾಯಚೂರನ್ನು ನಿರ್ಲಕ್ಷಿಸಲಾಗಿದೆ. ಇಲ್ಲಿನ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅಭಿವೃದ್ಧಿಯ ದೃಷ್ಟಿಯಿಂದ ರಾಯಚೂರನ್ನು ತೆಲಂಗಾಣ ರಾಜ್ಯದೊಂದಿಗೆ ವಿಲೀನಗೊಳಿಸಬೇಕಿದೆ ಎಂದು ಹೇಳಿದ್ದಾರೆ. 

ಈ ಕುರಿತ ವಿಡಿಯೋವನ್ನು ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ರೀ ಟ್ವೀಟ್ ಮಾಡಿದ್ದು, ಗಡಿಯಾಚೆಗಿನಿಂದಲೂ ತೆಲಂಗಾಣ ರಾಜ್ಯಕ್ಕೆ ಶ್ಲಾಘನೆಗಳು ವ್ಯಕ್ತವಾಗತೊಡಗಿವೆ. ಕರ್ನಾಟಕ ಬಿಜೆಪಿ ಶಾಸಕರು ರಾಯಚೂರನ್ನು ತೆಲಂಗಾಣ ರಾಜ್ಯದೊಂದಿಗೆ ವಿಲೀನಗೊಳಿಸಬೇಕೆಂದು ಹೇಳಿದ್ದಾರೆಂದು ಹೇಳಿದ್ದಾರೆ. 

ಕೆಟಿಆರ್ ಟ್ವೀಟ್'ಗೆ ಪ್ರತಿಕ್ರಿಯೆ ನೀಡಿರುವ ಕೆಲವರು, ರಾಯಚೂರಿನಲ್ಲಿರುವ ಸಾಕಷ್ಟು ಜನರು ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ರೈತ ಬಂಧು, ರೈತ ಭೀಮಾ, ಆಸರೆ ವಿಮೆ ಹಾಗೂ ಕಲ್ಯಾಣ ಲಕ್ಷ್ಮೀ ಸೇರಿದಂತೆ ಹಲವು ಯೋಜನೆಗಳ ಲಭ ಪಡೆಯಲು ಬಯಸುತ್ತಿದ್ದಾರೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com