ವಿಧಾನಸಭೆಯಲ್ಲಿ ನಾಳೆ ಜಂಟಿ ಅಧಿವೇಶನ ಉದ್ದೇಶಿಸಿ ಓಂ ಬಿರ್ಲಾ ಭಾಷಣ; ಕಾಂಗ್ರೆಸ್ ವಿರೋಧ

ವಿಧಾನಸಭೆಯಲ್ಲಿ ನಾಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಜಂಟಿ ಅಧಿವೇಶನ ಉದ್ದೇಶಿಸಿ ಮಾಡುವ ಭಾಷಣದಲ್ಲಿ ಭಾಗವಹಿಸದಿರಲು ಪ್ರತಿಪಕ್ಷ ಕಾಂಗ್ರೆಸ್ ತೀರ್ಮಾನಿಸಿದೆ.
ಸ್ಪೀಕರ್ ಓಂ ಬಿರ್ಲಾ
ಸ್ಪೀಕರ್ ಓಂ ಬಿರ್ಲಾ

ಬೆಂಗಳೂರು: ವಿಧಾನಸಭೆಯಲ್ಲಿ ನಾಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಜಂಟಿ ಅಧಿವೇಶನ ಉದ್ದೇಶಿಸಿ ಮಾಡುವ ಭಾಷಣದಲ್ಲಿ ಭಾಗವಹಿಸದಿರಲು ಪ್ರತಿಪಕ್ಷ ಕಾಂಗ್ರೆಸ್ ತೀರ್ಮಾನಿಸಿದೆ. ವಿಧಾನಸಭೆಯನ್ನು ರಾಜಕೀಯ ವೇದಿಕೆಯಾಗಿ ಬಳಸಿಕೊಳ್ಳುವುದು ಬೇಡ. ಬೇಕಿದ್ದರೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾಷಣ ಆಯೋಜಿಸುವುದಾದರೆ ಪಾಲ್ಗೊಳ್ಳುವುದಾಗಿ ತಿಳಿಸಿದೆ.

“ಅಮೃತಮಹೋತ್ಸವದ ಅಂಗವಾಗಿ ವಿಧಾನಸಭೆಯಲ್ಲಿ ಶುಕ್ರವಾರ ಈ ಜಂಟಿ ಅಧಿವೇಶನ ಆಯೋಜಿಸಲಾಗಿದೆ. ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾಷಣ ನಡೆಯಲಿ. ಆದರೆ ವಿಧಾನಸಭೆಯಲ್ಲಿ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯಾಹ್ನ ಕಲಾಪದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿ ಆಗ್ರಹಿಸಿದ್ದಾರೆ.

“ಈ ಬಗೆಯ ಹೊಸ ಸಂಪ್ರದಾಯ ಹುಟ್ಟುಹಾಕುವುದು ಬೇಡ. ಸ್ಪೀಕರ್ ಕುಳಿತುಕೊಳ್ಳುವ ಸ್ಥಾನದಲ್ಲಿ ಕೇವಲ ರಾಜ್ಯಪಾಲರು ಮಾತ್ರ ಕುಳಿತುಕೊಳ್ಳಬಬಹುದು. ಬೇರಾರೂ ಬೇಡ” ಎಂದಿದ್ದಾರೆ.

ಇದೇ ವೇಳೆ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಹಲವು ವಿಷಯಗಳ ಮೇಲಿನ ಚರ್ಚೆಗೆ ಅವಕಾಶವೇ ದೊರಕಿಲ್ಲ. ಹೀಗಾಗಿ ಕಲಾಪ ಅವಧಿ ವಿಸ್ತರಿಸಬೇಕೆಂಬ ಪ್ರತಿಪಕ್ಷ ಮನವಿಗೆ ಸ್ಪೀಕರ ಮತ್ತು ಸರ್ಕಾರ ಒಪ್ಪಿಲ್ಲ. ಕೊರೋನಾ ಮೂರನೇ ಅಲೆ ಆರಂಭವಾಗಿದ್ದು, ಈ ಕುರಿತು ಚರ್ಚೆಯಾಗಿಲ್ಲ. ಪ್ರತಿಪಕ್ಷ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಲು ಅವಕಾಶವೇ ಇಲ್ಲವೆಂದಾದ ಮೇಲೆ ಸದನಕ್ಕೆ ಹಾಜರಾಗುವ ಅಗತ್ಯವೇನಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com