ಸಾಸಿವೆ ಇಲ್ಲದ ಮನೆ ಇಲ್ಲ, ಬಿಜೆಪಿ ಹಗರಣ ನಡೆಸದ ಇಲಾಖೆ ಇಲ್ಲ!: ಕಾಂಗ್ರೆಸ್

ಸಾಸಿವೆ ಇಲ್ಲದ ಮನೆ ಇಲ್ಲ, ಬಿಜೆಪಿ ಹಗರಣ ನಡೆಸದ ಇಲಾಖೆ ಇಲ್ಲ. ಭ್ರಷ್ಟಾಚಾರವು ಬಿಜೆಪಿಯ ಕಣ ಕಣದಲ್ಲೂ ಅಡಕವಾಗಿದೆ ಎಂದು ಬಿಜೆಪಿ ಕುರಿತು ಕಾಂಗ್ರೆಸ್ ಗುರುವಾರ ಲೇವಡಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಸಾಸಿವೆ ಇಲ್ಲದ ಮನೆ ಇಲ್ಲ, ಬಿಜೆಪಿ ಹಗರಣ ನಡೆಸದ ಇಲಾಖೆ ಇಲ್ಲ. ಭ್ರಷ್ಟಾಚಾರವು ಬಿಜೆಪಿಯ ಕಣ ಕಣದಲ್ಲೂ ಅಡಕವಾಗಿದೆ ಎಂದು ಬಿಜೆಪಿ ಕುರಿತು ಕಾಂಗ್ರೆಸ್ ಗುರುವಾರ ಲೇವಡಿ ಮಾಡಿದೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿಚಾರವಾಗಿ ಪ್ರತಿಕೆಯೊಂದರ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಾಸಿವೆ ಇಲ್ಲದ ಮನೆ ಇಲ್ಲ, ಬಿಜೆಪಿ ಹಗರಣ ನಡೆಸದ ಇಲಾಖೆ ಇಲ್ಲ. ಭ್ರಷ್ಟಾಚಾರವು ಬಿಜೆಪಿಯ ಕಣ ಕಣದಲ್ಲೂ ಅಡಕವಾಗಿದೆ. ನಾವು ಆರೋಪಿಸಿದ್ದ ಅಂಬೇಡ್ಕರ್ ನಿಗಮದ ಹಗರಣ ಇಲಾಖೆಯ ಪ್ರಾಥಮಿಕ ತನಿಖೆಯಲ್ಲೇ ಬಹಿರಂಗವಾಗಿದೆ. ದಲಿತರ ಪಾಲಿನ ಹಣ ಲೂಟಿ ಹೊಡೆಯುತ್ತಿರುವ ಬಿಜೆಪಿ ಸರ್ಕಾರ ದಲಿತರ ಏಳಿಗೆ, ಅಭಿವೃದ್ಧಿಗೆ ಮಣ್ಣು ಹಾಕುತ್ತಿದೆ ಎಂದು ಹೇಳಿದೆ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಹಣದಲ್ಲಿ ಸಚಿವರು, ಅಧಿಕಾರಿಗಳ ಮೋಜು ಮಸ್ತಿಗೆ ಬಳಕೆ ಮಾಡುವ ಬಿಜೆಪಿಗೆ ಅಲ್ಲಿನ ಜನರ ಅಭಿವೃದ್ಧಿ ಬೇಕಿಲ್ಲ. ಕೆಕೆಆರ್'ಡಿಬಿಗೆ ಹಣ ನೀಡಿದ್ದೇ ಕಡಿಮೆ, ಆ ಹಣ ಖರ್ಚು ಮಾಡಿದ್ದೂ ಕಡಿಮೆ, ಆ ಖರ್ಚಿನಲ್ಲಿ ಅಭಿವೃದ್ಧಿಯ ಬದಲು ಪ್ರವಾಸಕ್ಕೆ ಬಳಕೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಇನ್ನೆಷ್ಟು ಅನ್ಯಾಯ ಮಾಡುವಿರಿ ಬಿಜೆಪಿಯವರೇ? ಎಂದು ಪ್ರಶ್ನಿಸಿದೆ.

ಆಹಾರ ಸಂಸ್ಕರಣೆ ಹಾಗೂ ಮಾರುಕಟ್ಟೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದಿತ್ತು. ರೈತರ ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲ, ಸಂಸ್ಕರಣಾ ಘಟಕಗಳೂ ಇಲ್ಲ, ಬೆಲೆ ಇಲ್ಲದ ಬೆಳೆ ಬೆಳೆಯುವ ಸಂಕಷ್ಟವೂ ತಪ್ಪಲಿಲ್ಲ. ಎಲ್ಲಿ ನಿಮ್ಮ ಯೋಜನೆ ರಾಜ್ಯದ ಬಿಜೆಪಿ ನಾಯಕರೇ? ಎಂದು ಕೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com