ಬೆಂಗಳೂರು: ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲ ನೀಡುವುದು ಔಪಚಾರಿಕ ಅನುಮೋದನೆಗೆ ಬಾಕಿ ಉಳಿದಿರುವಂತೆಯೇ ಜನತಾದಳದಲ್ಲಿ ಆಂತರಿಕ ಗೊಂದಲ ಆರಂಭವಾಗಿದೆ.
ಈಗ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಕೇಳುತ್ತಿರುವ ಬಿಜೆಪಿ ಈ ಹಿಂದೆ ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದ ಕುಪೇಂದ್ರ ರೆಡ್ಡಿ ಅವರಿ ಬೆಂಬಲ ಏಕೆ ನೀಡಿಲಿಲ್ಲ ಎಂದು ರೆಡ್ಡಿ ಅವರ ನಿಕಟವರ್ತಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಮುರ್ಮುಗೆ ಬೆಂಬಲ ನೀಡಲು ಮತ್ತು ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಅಂತಹುದೇ ಒಪ್ಪಂದದೊಂದಿಗೆ, ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಸಿರೋಯಾ ಅವರು ನಾಮಪತ್ರ ಸಲ್ಲಿಸದಂತೆ ಮಾಡಿ ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಅವಕಾಶ ಮಾಡಿಕೊಡಬಹುದಿತ್ತು ಎಂದು ಹೇಳಲಾಗುತ್ತಿದೆ.
ಅಂತಹ ಒಪ್ಪಂದವನ್ನು ರೂಪಿಸಬಹುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ ಅವರು, "ಅವರು ಅದನ್ನು ಮಾಡಬಹುದಿತ್ತು," ಎಂದು ಹೇಳಾಗಿದೆ
ಇದೇ ವಿಚಾರವಾಗಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು, 'ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಂದರ್ಭಗಳನ್ನು ಅವಲಂಬಿಸಿ ಪಕ್ಷವು ಚದುರುತ್ತಿದೆ. ನಮ್ಮದು ಪ್ರಾದೇಶಿಕ ಪಕ್ಷ.. ಮತ್ತೊಬ್ಬ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಅವರು ನಮ್ಮ ಬಳಿಗೆ ಬಂದಿದ್ದಾರೆಯೇ? ಎಂದು ಪ್ರಶ್ನಿಸಿದರು.
ಮುರ್ಮು ಅವರು ತಮ್ಮ ಗೆಲುವು ಖಚಿತವಾದ ಬಳಿಕವೂ ನಮ್ಮ ಬಳಿಗೆ ಬಂದು ಬೆಂಬಲ ಕೇಳಿದ್ದಾರೆ. ಹಾಗಾದರೆ ನಾವು ಯಾರನ್ನು ಬೆಂಬಲಿಸಬೇಕು? ಮುರ್ಮು ಅವರು ತುಂಬಾ ಹಿಂದುಳಿದ ಎಸ್ಟಿ ಸಮುದಾಯದಿಂದ ಬಂದವರು. ನೆನಪಿಡಿ, ಇದು ಅಧ್ಯಕ್ಷೀಯ ಚುನಾವಣೆ.. ಇಲ್ಲಿ ಸಂಕುಚಿತ ಪಕ್ಷಗಳ ಸಂಬಂಧಗಳ ಪ್ರಶ್ನೆ ಉದ್ಭವಿಸುವುದಿಲ್ಲ. ಜುಲೈ 13ರಂದು ಪಕ್ಷದ ಸಭೆ ಕರೆದಿದ್ದು, ಅಂದು ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ' ಎಂದು ಹೇಳಿದರು.
ಆದರೆ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಜೆಡಿಎಸ್ ಸಭೆಯಲ್ಲಿ ಭಾಗವಹಿಸಿದ್ದಾಗ ಯಶವಂತ್ ಸಿನ್ಹಾ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ್ದು ಏಕೆ? ಎಂಬ ಪ್ರಶ್ನೆ ಕೂಡ ಉದ್ಭವವಾಗಿದೆ.
ಈ ವೇಳೆ ಸ್ಪಷ್ಟನೆ ನೀಡಿದ ಜೆಡಿಎಸ್ ಸಂಸದೀಯ ಮಂಡಳಿ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಆಗ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರಲಿಲ್ಲ. ಆಕೆ ಅತ್ಯಂತ ಹಿಂದುಳಿದ ಸಮುದಾಯದ ಅಭ್ಯರ್ಥಿ ಎಂದು ಮನಗಂಡು ಅವರನ್ನು ಬೆಂಬಲಿಸಲು ನಿರ್ಧರಿಸಿದೆವು. ಅವರಿಗೆ ಬೆಂಬಲ ನೀಡಲು ಜೆಡಿಎಸ್ ಇನ್ನೂ ನಿರ್ಧರಿಸಿಲ್ಲ. ನಮ್ಮಲ್ಲಿ 32 ಶಾಸಕರು, ಕೇರಳದಲ್ಲಿ ಇಬ್ಬರು ಶಾಸಕರು ಮತ್ತು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ತಲಾ ಒಬ್ಬ ಸದಸ್ಯರಿದ್ದಾರೆ ಎಂದು ಹೇಳಿದ್ದಾರೆ.
Advertisement