ವಿದೇಶಿ ಜೀನ್ಸ್‌ ಎಂದೂ ಭಾರತೀಯತೆಯನ್ನು ಒಪ್ಪುವುದೇ ಇಲ್ಲ: ಕಾಂಗ್ರೆಸ್ ವಿರುದ್ಧ ಜೆಡಿಎಸ್ ಕಿಡಿ!

ವಿದೇಶಿ ಜೀನ್ಸ್‌ ಎಂದೂ ಭಾರತೀಯತೆಯನ್ನು ಒಪ್ಪುದೇ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ
Updated on: 

ಬೆಂಗಳೂರು: ವಿದೇಶಿ ಜೀನ್ಸ್‌ ಎಂದೂ ಭಾರತೀಯತೆಯನ್ನು ಒಪ್ಪುದೇ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣ ಎಕ್ಸ್  ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್ ಕಲುಷಿತ ಮನಸ್ಸಿನ ರಾಜ್ಯ ಕಾಂಗ್ರೆಸ್ ಕಣ್ಣಿಗೆ ಸದಾ ಕಾಮಾಲೆಯೇ, ಹೆಚ್.ಡಿ. ಕುಮಾರಸ್ವಾಮಿ ಅವರ ನಿಂದನೆಯೇ ಅದಕ್ಕೆ ಅಂಟಿದ ಬೇನೆ. ದೇಶವನ್ನೇ ಒಡೆದ ಪಕ್ಷಕ್ಕೆ ಹಿಂದುತ್ವವೂ ರುಚಿಸುವುದಿಲ್ಲ. ನಮ್ಮ ಆದರ್ಶ ಪರಂಪರೆಯೂ ಆಗುವುದಿಲ್ಲ. ಅಷ್ಟೇ ಏಕೆ, ಭಾರತವೂ ಸಹ್ಯವಲ್ಲ! ಅದರ , ವಿದೇಶಿ ಜೀನ್ಸ್‌ ಎಂದೂ ಭಾರತೀಯತೆಯನ್ನು ಒಪ್ಪುದೇ ಇಲ್ಲ. ಇದೇನು ಹೊಸತಲ್ಲ ಎಂದು ಕಿಡಿಕಾರಿದೆ.

ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರಕ್ಕೆ ಕುಮಾರಸ್ವಾಮಿ ಅವರು ಮುಕ್ತ ಮನಸ್ಸಿನಿಂದ ಭೇಟಿ ನೀಡಿದ್ದರು, ಹೌದು. ಅಲ್ಲಿನ ಶೈಕ್ಷಣಿಕ ವಾತಾವರಣ, ಮಕ್ಕಳ ಶಿಸ್ತು, ದೇಶಪ್ರೇಮವನ್ನು ಕಣ್ಣಾರೆ ಕಂಡ ಅವರ ಮನಸ್ಸಿನಲ್ಲಿ ಪರಿವರ್ತನೆ ಆಗಿದ್ದರೆ, ಅದೇನು ಮಹಾ ಅಪರಾಧವೇ? ಎಂದು ಪ್ರಶ್ನಿಸಿದೆ. 

ಪರಿವರ್ತನೆಯೇ ಜಗದ ನಿಯಮ, ಪ್ರತಿಗಾಮಿತನವೇ ಮಾರಣಹೋಮ. ತುಷ್ಠೀಕರಣದ ಅಂಟುವ್ಯಾಧಿಯಿಂದ ಬಳಲುತ್ತಿರುವ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ  ಮಾರಣಹೋಮದಲ್ಲಿಯೇ ನಂಬಿಕೆ! ಪ್ರಧಾನಿಗಳಾದ  ನರೇಂದ್ರ ಮೋದಿ ಅವರ ಜತೆ ರಾಜ್ಯದ ಅಭಿವೃದ್ಧಿಯ ಬಗ್ಗೆಯೇ ಕುಮಾರಸ್ವಾಮಿ ಅವರು ಚರ್ಚಿಸಿದ್ದಾರೆ. ಸಂಶಯ ಪಿಶಾಚಿ ಕಾಂಗ್ರೆಸ್ಸಿಗೆ ಹುಳುಕು ಹುಡುಕುವುದೇ ಚಟ. ಜಾತಿ, ಧರ್ಮಗಳನ್ನು ಒಡೆದು ದೇಶಕ್ಕೆ ಶಾಪವಾಗಿ, ಬೆದರಿಕೆಯಾಗಿರುವ ಪ್ರತಿಗಾಮಿ ಪಕ್ಷಕ್ಕೆ ಶಾಂತಿ, ಸೌಹಾರ್ದತೆ ಎಂದರೇನೇ ಅಪಥ್ಯ ಎಂದು ಟೀಕಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com