ಎಚ್‌ಡಿಕೆ ಪೆನ್‌ಡ್ರೈವ್ ಬಾಂಬ್: 'ಬ್ಲೂ ಫಿಲಂ ತೋರಿಸಿ ಬಂದವನಲ್ಲ.. ವರ್ಗಾವಣೆ ದಂಧೆ ಕುರಿತು ಸಾಕ್ಷ್ಯಇದೆ' ಎಂದ ಮಾಜಿ ಸಿಎಂ

ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ನನ್ನ ಬಳಿ ಸಾಕ್ಷಿಯಿದೆ ಎಂದು ಪೆನ್ ಡ್ರೈ ತೋರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ನನ್ನ ಬಳಿ ಸಾಕ್ಷಿಯಿದೆ ಎಂದು ಪೆನ್ ಡ್ರೈ ತೋರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.

ವರ್ಗಾವಣೆ ದಂಧೆಗೆ ದಾಖಲೆ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಹೇಳಿಕೆ ನೀಡಿದ ಬೆನ್ನಲ್ಲೇ ಕುಮಾರಸ್ವಾಮಿ ಪೆನ್‌ಡ್ರೈವ್ ಪ್ರದರ್ಶಿಸಿ ಅಚ್ಚರಿ ಮೂಡಿಸಿದ್ದಾರೆ. ಇಂದು ಕೆಂಗಲ್ ಗೇಟ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿರುವ ವೇಳೆ ಪೆನ್​ ಡ್ರೈವ್​ ಪ್ರದರ್ಶಿಸಿ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು. ತಮ್ಮ ಶರ್ಟ್ ಜೇಬಿನಲ್ಲಿದ್ದ ಪೆನ್‌ಡ್ರೈ ವೊಂದನ್ನು ಪ್ರದರ್ಶಿಸಿ ಈ ಪೆನ್ ಡ್ರೈವ್ ನಲ್ಲಿ ಕಾಂಗ್ರೆಸ್ ವರ್ಗಾವಣೆಗೆ ಸಂಬಂಧಿಸಿದ ಆಡಿಯೋ ಇದೆ ಎಂದು ಸುದ್ದಿಗಾರರಿಗೆ ಪ್ರದರ್ಶಿಸಿದ ಅವರು ಇದು ವರ್ಗಾವಣೆ ದಂಧೆಗೆ ಪ್ರಮುಖ ಸಾಕ್ಷಿಯಾಗಲಿದ್ದಾರೆ ಎಂದಿದ್ದಾರೆ.

ವರ್ಗಾವಣೆ ದಂಧೆಯ ಪೆನ್ ಡ್ರೈವ್ ಸದ್ಯ ನನ್ನ ಬಳಿ ಇರಲಿದೆ. ಸಮಯ ನೋಡಿ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ. ದಿನೇಶ್ ಗುಂಡೂರಾವ್ ಮೈ ಕೈ ಪರಚಿಕೊಳ್ಳುವುದು ಬೇಡ ಎಂದಿದ್ದಾರೆ. ಚುನಾವಣೆಯಲ್ಲಿ ಸೋತಾಗಲು ಜನರ ಕಷ್ಟಸುಖ ಆಲಿಸಿದ್ದೇವೆ. ನನಗೆ ಮೈ ಪರಚಿಕೊಳ್ಳುವ ಪರಿಸ್ಥಿತಿ ಬಂದಿಲ್ಲ. ನನ್ನ ಆಸ್ತಿ ಕುರಿತಂತೆಯೂ ಸರ್ಕಾರ ತನಿಖೆ ಮಾಡಬಹುದು. ರಾಜಕೀಯಕ್ಕೆ ಬರುವಮೊದಲು ಹಾಗೂ ರಾಜಕೀಯಕ್ಕೆ ಬಂದ ಮೇಲೆ ನನ್ನ ಆಸ್ತಿ ಎಷ್ಟಿದೆ ಎನ್ನುವುದನ್ನು ಸರ್ಕಾರ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು. ಇಂಧನ ಇಲಾಖೆಯ 10 ಕೋಟಿಗೆ ಮಾರಾಟವಾಗಿದೆ. ಆಡಳಿತದಲ್ಲಿ ನಗರಾಭಿವೃದ್ಧಿ ಇಲಾಖೆಯೇ ಇಲ್ಲ. ಸದ್ಯಕ್ಕೆ ಇರೋದು ನಗರಾಭಿವೃದ್ಧಿ ಇಲಾಖೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಟೆಂಟ್​ನಲ್ಲಿ ಬ್ಲೂ ಫಿಲಂ ತೋರಿಸಿ ಬಂದವನಲ್ಲ
ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತಾಡ್ತಾರೆ. ಕೆಎಸ್​ಟಿ ಟ್ಯಾಕ್ಸ್ ನಾನು ಇಟ್ಟಿರಲಿಲ್ಲ. ಮೈತ್ರಿ ಸರ್ಕಾರದ ವೇಳೆ ತಾಜ್ ವೆಸ್ಟ್ ಎಂಡ್ ಹೋಟೆಲ್ ದುಡ್ಡು ಕಟ್ಟಿ ಎಂದು ಕಾಂಗ್ರೆಸ್​ ಕಚೇರಿಗೆ ಬಿಲ್ ಕಳಿಸಿದ್ರಾ ಎಂದು ಪ್ರಶ್ನೆ ಮಾಡಿದರು. ಎರಡ್ಮೂರು ಲಕ್ಷ ಖರ್ಚು ಮಾಡೋ ಯೋಗ್ಯತೆ ಇಲ್ವಾ ನನಗೆ? ಯಾವುದೋ ಬ್ಲೂ ಫಿಲ್ಮ್ ಟೆಂಟ್ ನಲ್ಲಿ ತೋರಿಸಿಕೊಂಡು ಬಂದಿಲ್ಲ. ರೌಡಿಗಳಿಗೆ ಎಣ್ಣೆ ಸಪ್ಲೈ ಮಾಡಿಕೊಂಡು ಬಂದವನನು ನಾನಲ್ಲ ಎಂದು ಕಿಡಿಕಾರಿದರು. ನಗದು ಅಭಿವೃದ್ದಿ ಇಲಾಖೆ ಸರ್ಕಾರದಲ್ಲಿದೆ. ನಗರಾಭಿವೃದ್ದಿ ಇಲಾಖೆ ಕೇಳಿದ್ದೆ, ನಗದು ಅಭಿವೃದ್ದಿ ಇಲಾಖೆ ಈಗ ಕೇಳಿದ್ದೇನೆ. ಟನಲ್ ಮಾಡಲು ಹೋಗಿ ಬೆಂಗಳೂರನ್ನ ಸಮಾಧಿ ಮಾಡಿದ್ದೀರಿ. 1999ರಿಂದ ಹೇಗೆ ಅಭಿವೃದ್ದಿ‌ ಮಾಡಿದ್ದೀರಿ ಎಂದು ಬೇಕಾದಷ್ಟು ಇದೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಬಿಎಸ್‌ವೈ ನನ್ನ ಬಗ್ಗೆ ಒಳ್ಳೇಯ ಮಾತನಾಡಿದ್ದಾರೆ. ರಾಜ್ಯದ ಸಂಪತ್ತು ಉಳಿಸಲು ನನಗೆ ಕೈ ಜೋಡಿಸುವ ಎಲ್ಲರನ್ನು ಸ್ವಾಗತಿಸುತ್ತೇನೆ ಎಂದ ಅವರು ಟನಲ್ ಮಾಡುವುದಾಗಿ ಹೇಳಿ ರಾeಧಾನಿಯನ್ನು ಸಮಾಧಿ ಮಾಡಿದ್ದೀರಿ. ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ಬೆಂಗಳೂರು ಸಮಸ್ಯೆ ನಿರ್ವಹಣೆಗಾಗಿ ವೈಜ್ಞಾನಿಕ ರೀತಿನೀತಿಗಳನ್ನು ಅನುಸರಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com